ಬಳ್ಳಾರಿ: ಬೆಳಗಿನಜಾವ ವಾಕಿಂಗ್ ಗೆಂದು ತೆರಳಿದ್ದ ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್ ಕಿಡ್ನಾಪ್ ಅವರನ್ನ ಅಪರಿಚಿತರು ಕಿಡ್ನಾಪ್ ಮಾಡಿರುವ ಘಟನೆ ನಡೆದಿದೆ.
ಬೆಳಿಗ್ಗೆ ಸತ್ಯನಾರಾಯಣ ಪೇಟೆಯ ಶನೇಶ್ವರ ಗುಡಿ ಬಳಿ ಡಾ ಸುನೀಲ್ ಎಂದಿನಂತೆ ವಾಕಿಂಗ್ ಮಾಡ್ತಿದ್ರು. ವಾಕಿಂಗ್ ಮಾಡುವಾಗ ಟಾಟಾ ಇಂಡಿಗೋ ಕಾರಿನಲ್ಲಿ ಬಂದ ಅಪರಿಚಿತರು ವೈದ್ಯ ಸುನೀಲ್ ಅವರ ಬಾಯಿಮುಚ್ಚಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ.

ಕಿಡ್ನಾಪ್ ಮಾಡಿದ ಬಳಿಕ ಡಾ ಸುನೀಲ್ ಅವರ ಸಹೋದರ ವೇಣು ಅವರಿಗೆ ಕರೆ ಮಾಡಿ ಆರು ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ವೈದ್ಯ ಸುನೀಲ್ ಅವರ ಸಹೋದರ ವೇಣು ಅವರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾಗಿದ್ದಾರೆ.
ಕಿಡ್ನಾಪ್ ಗೆ ಸಹೋದರನ ವ್ಯವಹಾರ ಲಿಂಕ್ ಇದೆಯೇ ಅನ್ನೋ ಬಗ್ಗೆ ಅನುಮಾನ ಇದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಳ್ಳಾರಿಯ ಗಾಂಧಿನಗರ ಪೊಲೀಸರು ಪರಿಶೀಲನೆ ನಡೆಸಿದ್ದು ಕಿಡ್ನಾಪರ್ ಪತ್ತೆಗೆ ಮುಂದಾಗಿದ್ದಾರೆ.
ಕಿಡ್ನಾಪ್ ಮಾಡಿದವರು ವೈದ್ಯರ ಮೊಬೈಲ್ ನಿಂದಲೇ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಶಾಸಕ ಜನಾರ್ದನ ರೆಡ್ಡಿ ಕೂಡ, ಸುನೀಲ್ ಕುಟುಂಬಸ್ಥರನ್ನ ಭೇಟಿ ಮಾಡಿ, ಮಾಹಿತಿ ಪಡೆದಿದ್ದಾರೆ.
ಈ ವೇಳೆ, ಸುನೀಲ್ ಕುಟುಂಬಸ್ಥರು ಜನಾರ್ದನರೆಡ್ಡಿ ಮುಂದೆ ಅಳಲು ತೋಡಿಕೊಂಡಿದ್ದು, ಈ ವೇಳೆ, ಎಸ್ಪಿ ಶೋಭಾರಾಣಿ ಜೊತೆಗೆ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಕೂಡಲೇ ಕಿಡ್ನಾಪರ್ಸ್ಗಳನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ. ಇನ್ನು ವಾಕಿಂಗ್ ಹೋದ ವೇಳೆ ವೈದ್ಯನನ್ನ ಕಿಡ್ನಾಪ್ ಮಾಡಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.