ಗದಗ: ಚಿರತೆ ದಾಳಿಗೆ ಹಸು, ಆಡು ಬಲಿಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಅಂಬರಕೊಳ್ಳದಲ್ಲಿ ಈ ಘಟನೆ ಜರುಗಿದ್ದು, ಭಾನುವಾರ ರಾತ್ರಿ ಚಿರತೆ ಸಾಕು ಪ್ರಾಣಿಗಳನ್ನ ತಿಂದು ಹಾಕಿದೆ.
ತಾವರೆಪ್ಪ ಮಾಳೋತ್ತರ ಎನ್ನುವವರಿಗೆ ಸೇರಿದ್ದ ಆಡು, ಹಸುಗಳನ್ನ ತೋಟದ ಮನೆಯಲ್ಲಿ ಕಟ್ಟಲಾಗಿತ್ತು. ಈ ವೇಳೆ ಚಿರತೆ ಜಾನುವಾರುಗಳ ಮೆಲೆ ದಾಳಿ ಮಾಡಿದೆ.

ಇನ್ನು ಚಿರತೆ ದಾಳಿ ನಡೆದ ಕೂಗಳತೆ ದೂರದಲ್ಲಿಯೇ ರಾಣಿ ಚೆನ್ನಮ್ಮ ವಸತಿ ಶಾಲೆ ಇದೆ.ಹೀಗಾಗಿ ಅರಣ್ಯ ಇಲಾಖೆ ಇತ್ತ ಗಮನಹರಿಸಿ ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಸಬೇಕು. ನಮ್ಮ ಆತಂಕ ದೂರ ಮಾಡಬೇಕು ಎಂದು ಅಲ್ಲಿನ ಗ್ರಾಮಸ್ಥರು ಜಿಲ್ಲಾಡಳಿತ, ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.