ಗದಗ: ಯಾವುದೇ ಫಲಾಪೇಕ್ಷೆ ಹಾಗೂ ನೀರಿಕ್ಷೆ ಇಲ್ಲದೆ ಆತ್ಮತೃಪ್ತಿಗಾಗಿ ಮಕ್ಕಳಿಗೆ SSLC ಕಾರ್ಯಾಗಾರ ನಡೆಸಿಕೊಡುವ ಮೂಲಕ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತಿರುವ ಮಂಗಳೂರಿನ ಯುನಿವರ್ಸಲ್ ಕಾಲೇಜ್ ಟ್ರಸ್ಟ್ ಕಾರ್ಯ ಸ್ಮರಣೀಯವಾದುದು ಹಾಗೂ ಇಂಥಹ ಕಾರ್ಯಗಳಿಗೆ ಸಹಕಾರ ನೀಡಿದ ಚಿಕ್ಕಟ್ಟಿ ಸಂಸ್ಥೆಯ ಸಹಯೋಗ ಎಂದಿಂದಿಗೂ ಅಭಿನಂದನೀಯ ಎಂದು ಗದಗ ಗ್ರಾಮೀಣ ವಲಯದ ಶಿಕ್ಷಣಾಧಿಕಾರಿಗಳಾದ ಶ್ರೀ ವಿ.ವಿ.ನಡುವಿನಮನಿ ಅವರು ಹೇಳಿದರು.
ಮಂಗಳೂರಿನ ಯುನಿವರ್ಸಲ್ ಕಾಲೇಜ್ ಟ್ರಸ್ಟ್ ಮತ್ತು ಧಾರವಾಡದ ಗ್ರಾಮ ವಿಕಾಸ ಸೊಸೈಟಿ ಹಾಗೂ ಚಿಕ್ಕಟ್ಟಿ ಸಮೂಹ ಸಂಸ್ಥೆಯವರ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತರಬೇತುದಾರರು ಹಾಗೂ ಟ್ರಸ್ಟ್ ನ ನಿರ್ದೇಶಕರಾದ ಶಮಿಶ್ರೀಯವರು ರಾಷ್ಟ್ರಮಟ್ಟದಲ್ಲಿ ಮಾಸ್ಟರ್ ಟ್ರೇನರ್ ಆಗಿ ಗುರುತಿಸಿಕೊಂಡವರು. ಅವರು ಪ್ರಾಯೋಗಿಕವಾಗಿ ತಿಳಿಸುವಂತಹ ಎಲ್ಲ ವಿಷಯಗಳನ್ನು ವಿದ್ಯಾರ್ಥಿಗಳು ಪ್ರತಿನಿತ್ಯ ಪಾಲಿಸಬೇಕು.ಆ ಮೂಲಕ ತಮ್ಮ SSLC ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸಿಕೊಂಡು ಕಾರ್ಯಾಗಾರದ ಉದ್ದೇಶವನ್ನ ಸಾರ್ಥಕಗೊಳಿಸಬೆಕು ಎಂದು ಹೇಳಿದರು.
ಅಲ್ಲದೇ ಕಾರ್ಯಾಗಾರಕ್ಕೆ ಸಹಕಾರ ನೀಡಿ ಸಕಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ ಚಿಕ್ಕಟ್ಟಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.
ಚಿಕ್ಕಟ್ಟಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಪ್ರಾಸ್ಥಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಹಾಗೂ ಪರೀಕ್ಷಾ ಫಲಿತಾಂಶದ ಅಭಿವೃದ್ಧಿಗಾಗಿ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವದು ಸೂಕ್ತ. ಇದರಿಂದ ಸತತ ಅಭ್ಯಾಸ ಮಾಡುವ ಮೂಲಕ ಸಫಲತೆಯನ್ನು ಪಡೆಯಬಹುದು ಎಂದರು.

ಕಾರ್ಯಾಗಾರದ ಕೇಂದ್ರಬಿಂದುವಾದ, ಯುನಿವರ್ಸಲ್ ನಾಲೇಡ್ಜ ಟ್ರಸ್ಟನ ನಿರ್ದೇಶಕರಾದ, ಶಮಿಶ್ರೀಯವರು ಈ ವೇಳೆ ಮಾತನಾಡಿ, ಧನಾತ್ಮಕವಾದ ಶಿಕ್ಷಣವನ್ನು ಮಕ್ಕಳು ಪ್ರಾಯೋಗಿಕವಾಗಿ ಆಸಕ್ತಿಯಿಂದ ಕಲಿಯಬೇಕು,ಅಂದಾಗ ಮಾತ್ರ ಅದರ ಫಲಿತಾಂಶ ಸಿಗುತ್ತದೆ ಎಂದು ಹೇಳುತ್ತಾ, ಮೆದುಳಿನ ಸಮತೋಲನ, ಶ್ರೇಷ್ಠ ಮೆದುಳಿನ ಯೋಗ, ದೇಹವನ್ನು ಪರಿಶುದ್ಧವಾಗಿಡುವುದು, ಸಮತೋಲನ ಉಸಿರಾಟ ಹಾಗೂ ರಕ್ಷಣೆಗಾಗಿ ಬಿಳಿ ಬೆಳಕು ಸೇರಿದಂತೆ ಹಲವಾರು ವಿಷಯಗಳನ್ನ ಪ್ರಾಯೋಗಿಕವಾಗಿ ತಿಳಿಸುವ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು.
ಕಾರ್ಯಾಗಾರವನ್ನ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ನಿವೃತ್ತ ಉಪ ನಿರ್ದೇಶಕರಾದ ಎ. ಎನ್. ನಾಗರಳ್ಳಿಬಹಾಗೂ ಆಯ್. ಬಿ. ಬೆನಕೊಪ್ಪ, ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಜೆ. ಕೆ ಜಮಾದಾರ, ಚಿಕ್ಕಟ್ಟಿ ಬಿ.ಸಿ.ಎ. ಕಾಲೇಜಿನ ಪ್ರಾಂಶುಪಾಲರಾದ ಬಿಪಿನ್ ಎಸ್. ಚಿಕ್ಕಟ್ಟಿಯವತರು ಸೇರಿದಂತೆ ಸಂಸ್ಥೆಯ ಶಿಕ್ಷಕ ಬಳಗ ಹಾಗೂ ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಪ್ರೀಯಾಂಕಾ ಮಾಂಥಾ ಪ್ರಾರ್ಥನಾ ಗೀತೆ ಸಾದರಪಡಿಸಿದರು. ಪ್ರೊ. ಶ್ರೀಶೈಲ ಬಡಿಗೇರ ಕಾರ್ಯಕ್ರಮ ನಿರೂಪಿಸಿದರೆ, ಪ್ರೊ. ಅನೀಲ ನಾಯಕ್ ವಂದನಾರ್ಪಣೆಗೈದರು.