ಈಗಾಗಲೇ ಭಾರತದ ಪ್ರಜೆಗಳು ಅನ್ಯ ದೇಶದಲ್ಲಿ ಅಧಿಕಾರದ ಗದ್ದುಗೆ ಏರಿರುವದನ್ನ ನೋಡಿದ್ದೀರಾ. ಅದೇ ರೀತಿ ಕೆನಡಾ ದೇಶದ ಪಿಎಂ ರೇಸ್ ನಲ್ಲಿ ಕನ್ನಡಿಗರೊಬ್ಬರು ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದಾರೆ.
ಹೌದು, ಕೆನಡಾ ದೇಶದ ಪಿಎಂ ರೇಸ್ ಗೆ ಚಂದ್ರ ಆರ್ಯ ಅನ್ನೋರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿರೋ ಚಂದ್ರ ಆರ್ಯ, ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡದ ಶಕ್ತ ಏನೆಂಬುದನ್ನ ಪಸರಿಸಿದ್ದಾರೆ.

ಕೆನಡಾ ಸಂಸದರಾಗಿರೋ ತುಮಕೂರಿನ ಶಿರಾ ಮೂಲದ ಚಂದ್ರ ಆರ್ಯ, ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ವೇಳೆ ರಾಷ್ಟ್ರಕವಿ ಕುವೆಂಪು ಹಾಗೂ ಡಾ.ರಾಜ್ ಕುಮಾರವರನ್ನ ಸ್ಮರಿಸಿದ್ದಾರೆ.ಅಲ್ಲದೇ, ಎಲ್ಲಾದರೂ ಇರು, ಎಂಥಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು,ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಡಾ.ರಾಜ್‌ಕುಮಾರ್ ಹಾಡಿದ ಪ್ರಸಿದ್ಧ ಹಾಡಿನ ಸಾಲನ್ನು ಉಲ್ಲೇಖಿಸಿ, ಕನ್ನಡದ ಹಿರಿಮೆಯನ್ನ ಸಾರಿದ್ದಾರೆ.
ಈ ಹಿಂದೆ ಚಂದ್ರ ಆರ್ಯ ಅವರು, ಕೆನಡಾ ಸಂಸದರಾಗಿ ಆಯ್ಕೆಯಾದ ವೇಳೆಯೂ ಸಂಸತ್ ನಲ್ಲಿ ಕನ್ನಡದಲ್ಲಿ ಮಾತನಾಡಿ, ಭಾರತ ದೇಶದ ಗಮನ ಸೆಳೆದಿದ್ದರು.
ಸದ್ಯ, ಲಿಬರಲ್ ಪಕ್ಷದಿಂದ ಕೆನಡಾ ಪ್ರಧಾನಿ ಹುದ್ದೆಗೆ ಚಂದ್ರ ಆರ್ಯ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ.