ಗದಗ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ದಿನಗಳಿಂದ ಸಚಿವ ಸಂಪುಟ ವಿಸ್ತರಣೆ ವಿಚಾರ ಜೋರಾಗಿದೆ. ಸಚಿವ ಸ್ಥಾನದ ಮೇಲೆ ಆಕಾಂಕ್ಷೆ ಇಟ್ಟಿರೋ ಶಾಸಕರ ಪಟ್ಟಿ ಕೂಡ ದೊಡ್ಡದೇ ಇದೆ. ಅದೇ ರೀತಿ ಗದಗ ಜಿಲ್ಲೆ ರೋಣ ಶಾಸಕರಾಗಿರೋ ಜಿ.ಎಸ್.ಪಾಟೀಲ ಕೂಡ, ಸಚಿವ ಸ್ಥಾನದ ಆಕಾಂಕ್ಷಿಯಾಗಿರೋದು ಬಹಳ ದಿನಗಳಿಂದ ಚರ್ಚೆಯಲ್ಲಿರುವ ವಿಚಾರ.
ಈ ಕುರಿತು ಪರೋಕ್ಷವಾಗಿ ಜಿ.ಎಸ್.ಪಾಟೀಲ ಅಸಮಾಧಾನ ಹೊರಹಾಕಿದ್ದಾರೆ. ಇಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಸಚಿ ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನಮಾನ ಸಿಗುವ ವಿಚಾರಕ್ಕೆ, “ಈಗಾಗಲೇ 40 ವರ್ಷ ಹೀಗೆಯೇ ಕಳೆದಿದ್ದೇನೆ” ಹೈಕಮಾಂಡ್ ಯಾವಾಗ ನಿರ್ಧಾರ ಕೈಗೊಳ್ಳುತ್ತೆ ಆಗ ಸಚಿವನಾಗ್ತೇನೆ ಅಂತ ಪರೋಕ್ಷವಾಗಿ ತಮ್ಮ ಅಂತರಾಳ ಹೇಳಿದ್ದಾರೆ.
ನಮ್ಮ ಕಾರ್ಯಕರ್ತರು ಕೂಡ ಸಿಎಂಗೆ ಒತ್ತಾಯ ಮಾಡುತ್ತಾನೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಸರ್ಕಾರದಲ್ಲಿ ರೋಣ ಕ್ಷೇತ್ರಕ್ಕೆ ನಿರಂತರ ಅನ್ಯಾಯವಾಗುತ್ತಾ ಬಂದಿದೆ. ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡದೇ ಅನ್ಯಾಯ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪಾಟೀಲರು, ಹಾಗೇನಿಲ್ಲ..ಬಿಜೆಪಿ ಸರ್ಕಾರದಲ್ಲಿ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿದೆ.ನಾವೂ ಸಹ ವಿಚಾರ ಮಾಡಬೇಕಿದೆ, ಸಣ್ಣ ಜಿಲ್ಲೆಗಳಿವೆ.ಆಯ್ಕೆ ಆದವರು ಬಹಳ ಜನ ಇದ್ದಾರೆ. ನಾವು ಕಟಾನಕಟಿ 113, 14 ಇದ್ರೆ ಮಾತು ಬೇರೆ ಇತ್ತು. ಜನ ನಮಗೆ ಒಳ್ಳೆಯ ತೀರ್ಪು ಕೊಟ್ಟಿದ್ದು, ಅದನ್ನು ಗೌರವದಿಂದ ಸ್ವೀಕಾರ ಮಾಡಿ ಜನ್ರ ಮೆಚ್ಚುಗೆಗೆ ಪಾತ್ರವಾಗಬೇಕಾಗಿದೆ. ಅದಕ್ಕೆ ಟೈಂ ಬಂದಾಗ ನೋಡೋಣ ಎಂದು ಜಿ ಎಸ್ ಪಾಟೀಲ್ ಹೇಳಿದ್ದಾರೆ.
ಇನ್ನು ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಉತ್ತರಿಸಿದ ಪಾಟೀಲರು, ಈ ಬಗ್ಗೆ ನನಗೆ ಗೊತ್ತಿಲ್ಲ. ಶಾಸಕಾಂಗ ಪಕ್ಷದ ಸಭೆ ಇದೆ. ಹೀಗಾಗಿ ಸುರ್ಜೇವಾಲ್ ಬರ್ತಾಯಿದ್ದಾರೆ. ಅಲ್ಲದೇ ಗೃಹಸಚಿವ ಪರಮೇಶ್ವರ ಜೊತೆ ಎಸ್ಸಿ, ಎಸ್ಟಿ ಶಾಸಕರ ಸಭೆ ವಿಚಾರವಾಗಿ ಮಾತನಾಡಿ,ಅದು ಅವರಿಗೆ ಬಿಟ್ಟ ವಿಚಾರ. ಅವರು ಹಿರಿಯ ಮಂತ್ರಿಗಳಿದ್ದಾರೆ. ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.ಸಂಘಟನೆ ವಿಚಾರದಲ್ಲಿ ಹೇಳಿರಬಹುದು ಎಂದು ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ರೋಣ ಶಾಸಕರಾದ ಜಿ.ಎಸ್.ಪಾಟೀಲ ಮಾತನಾಡಿದ್ದಾರೆ.