ಬೆಂಗಳೂರು: ನಮ್ಮ ಸರ್ಕಾರದ ಬಗ್ಗೆ ಯಾವುದೇ ಸ್ವಾಮಿಜಿಗಳು ಭವಿಷ್ಯ ನುಡಿಯುವದು ಬೇಡ ಎಂದು ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಮೊನ್ನೆಯಷ್ಟೇ, ವಿನಯ್ ಗುರೂಜಿ ಡಿಕೆಶಿ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಅನ್ನುವ ಭವಿಷ್ಯದ ಮಾತನ್ನ ಹೇಳಿದ್ದರು. ಇದೇ ವಿಚಾರವಾಗಿ ಪತ್ರಕರ್ತರು ಡಿಕಶಿ ಅವರನ್ನ ಕೇಳಿದಾಗ, ಯಾವ ಪವರೂ ಇಲ್ಲ, ಯಾವ ಶೇರಿಂಗೂ ಇಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ ಎಂದಿದ್ದಾರೆ.

ನೀವು ಸಿಎಂ ಆಗುತ್ತೀರಿ ಎಂಬ ವಿನಯ್ ಗುರೂಜಿ ಹೇಳಿಕೆ ಬಗ್ಗೆ ಪ್ರತಿಕಿಯಿಸಿದ ಅವರು ‘ನಮ್ಮ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಸ್ವಾಮೀಜಿಗಳು ನಮ್ಮ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುವುದು ಬೇಡ ಅಂತ ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.