ಹಾವೇರಿ: ಬೈಕ್ ಸವಾರರು ಈ ಸುದ್ದಿಯನ್ನ ನೋಡಲೇಬೆಕು. ಜೊತೆಗೆ ಕೆಳಗಿನ ವಿಡಿಯೋ ಕೂಡ ನೋಡಬೇಕಾದದ್ದೆ! ಯಾಕಂದ್ರೆ, ನಾವು ಬೈಕ್ ಚಲಾಯಿಸುವಾಗ ನಮ್ಮ ಜೀವ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ, ನಮ್ಮ ಹಿಂದೆ ಕುಳಿತಿರುವರದ್ದು ಇರುತ್ತದೆ. ತಮ್ಮ ಪ್ರಾಣದ ಗ್ಯಾರಂಟಿಯನ್ನ ಅವರು ನಮ್ಮ ಕೈಯಲ್ಲಿ ಅಂದರೆ, ಬೈಕ್ ಚಲಾಯಿಸುವವರ ಬಳಿ ಕೊಟ್ಟು ಕೂತಿರುತ್ತಾರೆ. ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ, ನಮ್ಮ ಹಿಂದೆ ಕೂತಿರುವ ಸವಾರರ ಪ್ರಾಣ ಹಾರಿ ಹೋಗಿರುತ್ತದೆ. ಜೊತೆಗೆ ನಮ್ಮ ಜೀವಕ್ಕೂ ಯಾವ ಗ್ಯಾರಂಟಿನೂ ಇರೋಲ್ಲ..
ಇಂಥದ್ದೊಂದು ಘಟನೆ ಪಕ್ಕದ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಬೈಕ್ ಸವಾರನ ನಿರ್ಲಕ್ಷ್ಯಕ್ಕೆ ಆತನ ತಾಯಿ ಬಲಿಯಾಗಿದ್ದಾಳೆ.
ಸವಾರ ಬೈಕ್ ನಲ್ಲಿ ಎಲ್ಲಿಗೋ ಆತನ ತಾಯಿಯನ್ನ ಕರೆದುಕೊಂಡು ಹೋಗುವ ವೇಳೆ, ಸವಾರನಿಗೆ ಟೋಲ್ ಗೇಟ್ ನಿಲ್ಲು ಎಂದು “ತಡೆಗಂಬ” ಸೂಚನೆ ನೀಡಿದೆ. ಅಷ್ಟಾದರೂ ತಡೆಗಂಬ ತಪ್ಪಿಸಿ ಮುಂದೆ ಚಲಾಯಿಸಿದ್ದಾನೆ. ಈ ವೇಳೆ, ಆತನ ಬೈಕ್‌ನಲ್ಲಿ ಹಿಂದೆ ಕುಳಿತಿದ್ದ, ಸವಾರನ ತಾಯಿಗೆ ಟೋಲ್ ಗೇಟ್ ನ ತಡೆಗಂಬ ಬಡಿದು, ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ ನಲ್ಲಿ ಈ ದಾರುಣ ಘಟನೆ ನಡೆದಿದ್ದು, ಬೈಕ್ ಅವಘಡದ ಸಿಸಿಟಿವಿ ದೃಶ್ಯ ಬೆಚ್ಚಿಬೀಳಿಸುವಂತಿದೆ.
ಗಿರಿಜಮ್ಮ ಹಾವೇರಿ ಮೃತ ಮಹಿಳೆಯಾಗಿದ್ದು, ಟೋಲ್ ಗೇಟ್ ಹಾಕಿದ್ದರೂ ಸೈಡಿಗೆ ಹೋಗದೆ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿದ್ದರಿಂದ ದುರಂತ ಸಂಭವಿಸಿದೆ.
ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಇನ್ನಾದರೂ, ಬೈಕ್ ಸವಾರರು ತಮ್ಮ ಹಾಗೂ ಹಿಂದೆ ಕುಳಿತ ಸವಾರರ ಜೀವದ ಜೊತೆ ಚೆಲ್ಲಾಟವಾಡದಿರಿ ಅನ್ನೋದು ನಮ್ಮ ಆಶಯವಾಗಿದೆ.