Home » News » ಪ್ರೊ ವಿಕ್ರಮ ಶಿರೋಳರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಪ್ರೊ ವಿಕ್ರಮ ಶಿರೋಳರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

by CityXPress
0 comments

ಲಕ್ಷ್ಮೇಶ್ವರ: ನಮನ ಟ್ರಸ್ಟ್ ,ಗದಗ ಹಾಗೂ ಶ್ರೀಮತಿ.ಕಮಲಾ ಮತ್ತು ಶ್ರೀ.ವೆಂಕಪ್ಪ ಎಂ. ಅಗಡಿ ಇಂಜನೀಯರಿಂಗ್ ಕಾಲೇಜು ಲಕ್ಷ್ಮೇಶ್ವರ ಸಹಯೋಗದಲ್ಲಿ 21ನೇ ಅಗಡಿ ಕಾಲೇಜು ಸಂಸ್ಥಾಪನಾ ದಿನಾಚರಣೆಯಂದು 2024-25 ನೇ ಸಾಲಿನ ಪ್ರೊ. ವಿ. ಕೆ. ಕುಷ್ಟಗಿ-ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಆಡಳಿತಾಧಿಕಾರಿ ಪ್ರೊ. ವಿಕ್ರಮ ಶಿರೋಳ ಅವರಿಗೆ ನೀಡಿ ಗೌರವಿಸಲಾಗಿದೆ.

 ನಮನ ಟ್ರಸ್ಟ್, ಗದಗ ವತಿಯಿಂದ  ಪ್ರತಿವರ್ಷ ಅಗಡಿ ಕಾಲೇಜಿನಲ್ಲಿ ಸೇವೆ ಸಲ್ಲಿಸುವ ಪ್ರಾಧ್ಯಾಪಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. 2023-24ನೇ ಶೈಕ್ಷಣಿಕ ವರ್ಷ ಈ ಪ್ರಶಸ್ತಿಯನ್ನು ಇಲೆಕ್ಟ್ರಾನಿಕ್ಸ್ ವಿಭಾಗದ  ಸಹ ಪ್ರಾಧ್ಯಾಪಕ ಪ್ರೊ.ಬಸವರಾಜ ಸೊರಟೂರು ಪಡೆದಿದ್ದರು. ಒಟ್ಟು 10 ಪ್ರಾಧ್ಯಾಪಕರನ್ನು ನಾಮನಿರ್ದೇಶನ ಮಾಡಲಾಗಿದ್ದು, 5 ಹಂತಗಳ ಆಯ್ಕೆ ಪ್ರಕ್ರಿಯೆಯಲ್ಲಿ ಒಬ್ಬರಿಗೆ ಪ್ರಶಸ್ತಿ ನೀಡಲಾಗಿದೆ.

 ಅಗಡಿ ಮಹಾವಿದ್ಯಾಲಯದಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ನಮನ ಟ್ರಸ್ಟ್ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆಗೆ ಉತ್ತೇಜನ ನೀಡಲು ಮತ್ತು ಪಾಠ-ಶಿಕ್ಷಣ ಪ್ರಕ್ರಿಯೆಯನ್ನು ಸುಧಾರಿಸಲು ಮುನ್ನೆಡೆಯುತ್ತಿರುವ ಒಂದು ಸೇವಾಸಂಸ್ಥೆಯಾಗಿದೆ.  ಈ ಟ್ರಸ್ಟ್‌ನ ಮುಖ್ಯ ಉದ್ದೇಶವು ಅನುಭವಾತ್ಮಕ ಅಧ್ಯಯನವನ್ನು ಪ್ರತಿ ಹಂತದ ಶ್ರೇಣಿಯ ಕಲಿಕಾ ಪ್ರಕ್ರಿಯೆಯಲ್ಲಿ ಜಾರಿಗೊಳಿಸುವುದು.

ಈ ಸಂದರ್ಭದಲ್ಲಿ  ಅಗಡಿ ಸಂಸ್ಥೆಯ ಅಧ್ಯಕ್ಷರಾದ  ಹರ್ಷವರ್ಧನ ಅಗಡಿ,  ಗೀತಾ ಎಚ್ ಅಗಡಿ,  ಸಮೀರ ಆನಂದ  ಅಗಡಿ,ಪ್ರಾಚಾರ್ಯರಾದ ಡಾ ಪರಶುರಾಮ ಬಾರಕಿ , ಡಾ ಎನ್ ಹಯವದನ, ಡಾ ರಾಜಶೇಖರ ಮೂಲಿಮನಿ ನಮನ ಟ್ರಸ್ಟ್ ಸದಸ್ಯರಾದ . ಹರೀಶ್ ಮೇಕಳಿ, ಶ್ವೇತಾಶ್ರೀ ಸವಾಗವೆ ಮುಂತಾದವರು ಉಪಸ್ಥಿತರಿದ್ದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb