ಗದಗ: ಗದಗನ ಪ್ರತಿಷ್ಠಿತ ಸಮೂಹ ಶಿಕ್ಷಣ ಸಂಸ್ಥೆಯಾಗಿರುವ ಚಿಕ್ಕಟ್ಟಿ ಮಹಾವಿದ್ಯಾಲಯದ ಆವರಣದಲ್ಲಿ ನಾಳೆ (9-1-2025 ಗುರುವಾರ) ದಂದು ಪಿಯುಸಿ ವಿಜ್ಞಾನ ಪ್ರವೇಶಾತಿ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಶೇಷವೆಂದರೆ, ಪ್ರಸ್ತುತ ವರ್ಷದಿಂದ ಬಳ್ಳಾರಿಯ ಪ್ರತಿಷ್ಠಿತ ಶ್ರೀ ಚೈತನ್ಯ ಸಮೂಹ ಕಾಲೇಜುಗಳು ಗದಗನ ಚಿಕ್ಕಟ್ಟಿ ಕಾಲೇಜುಗಳ ಸಹಯೋಗದಲ್ಲಿ ಪ್ರಾರಂಭವಾಗಲಿವೆ ಅನ್ನೋದು ಇಲ್ಲಿ ಗಮನಾರ್ಹ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪಾಲಕರ ಅನುಕೂಲತೆಯ ದೃಷ್ಟಿಯಿಂದ, ಗುರುವಾರ ಮಧ್ಯಾಹ್ನ 12 ಗಂಟೆಗೆ ಈ ಜಾಗೃತಿ ಕಾರ್ಯಕ್ರಮ ನಡೆಯಲಿವೆ.
ಜಾಗೃತಿ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ, ಶ್ರೀಚೈತನ್ಯ ಸಮೂಹ ಕಾಲೇಜುಗಳ ಅಧ್ಯಕ್ಷರಾದ ಡಾ. ಪಿ. ರಾಧಾಕೃಷ್ಣ ಅವರು ಆಗಮಿಸಲಿದ್ದು, ವಿಧ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಹಾಗೂ ಪಿಯುಸಿ ಸೈನ್ಸ್ ಕೋರ್ಸ್ ಕುರಿತಾದ ಕಲಿಕೆ ಹಾಗೂ ಫಲಿತಾಂಶದ ಬಗ್ಗೆ ಸಂಪೂರ್ಣ ಮಾಹಿತಿ ನಿಡಲಿದ್ದಾರೆ.
ಅಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಗಳಾದ ‘NEET’ ಹಾಗೂ ‘ಜೆಇಇ’ ಯಂತಹ ಕೋರ್ಸ್ಗಳ ಕುರಿತಾದ ಅತ್ಯಂತ ಅವಶ್ಯಕ ಮಾಹಿತಿ ನೀಡಿ, ಮಕ್ಕಳ ಭವಿಷ್ಯದ ಬಗ್ಗೆ ಇರುವ ಪಾಲಕರ ಗೊಂದಲಗಳಿಗೆ ಸ್ಪಷ್ಟತೆಯ ಪರಿಹಾರವನ್ನು ಒದಗಿಸಲಿದ್ದಾರೆ.
ಈ ಮಹತ್ವ ಪೂರ್ಣವಾದ ಕಾರ್ಯಕ್ರಮಕ್ಕೆ ಹಾಗೂ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಬಗ್ಗೆ ಅರ್ಥಮಾಡಿಕೊಳ್ಳುವ ಸದಾವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಚಿಕ್ಕಟ್ಟಿ ಸಮೂಹ ಸಂಸ್ಥೆ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ತಿಳಿಸಿದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ಪಾಲಕರನ್ನ ಕರೆದೊಯ್ಯಲು ಬೆಳಿಗ್ಗೆ 11:45 ಕ್ಕೆ ನಗರದ ಗಾಂಧಿ ಸರ್ಕಲ್ ಬಳಿ ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ಇದರ ಸದುಪಯೋಗವನ್ನ ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.ಈ ಕುರಿತು ಸಂಪರ್ಕಿಸಲು 1)95380 47230, 2) 97406 03198, ಹಾಗೂ 3) 9481587762 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.