ಗದಗ: ಗದಗ ಜಿಲ್ಲೆಗೆ ಕೇವಲ ಆರು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರನ್ನ ವರ್ಗಾವಣೆ ಮಾಡಲಾಗಿದೆ.
ಹೌದು, ಜಸ್ಟ್ ಆರೇ ತಿಂಗಳಿಗೆ ಗದಗನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ವರ್ಗಾವಣೆಗೊಂಡಿದ್ದು, ನೂತನ ಜಿಲ್ಲಾಧಿಕಾರಿಯನ್ನಾಗಿ C N. ಶ್ರೀಧರ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
2024 ರ ಜುಲೈ – 5 ರಂದು ಗೋವಿಂದರಡ್ಡಿ ಅವರು ಗದಗ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿದ್ದರು. ಆದರೆ ಇಂದು ಸಂಜೆಯಷ್ಟೆ ಅವರನ್ನ ಬೇರೆ ಯಾವುದೇ ಹುದ್ದೆಗೆ ನೇಮಕಗೊಳಿಸದೇ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ.
ಇನ್ನು ಜಿಲ್ಲಾಧಿಕಾರಿ ಇಷ್ಟು ಕಡಿಮೆ ಅವಧಿಯಲ್ಲಿ ವರ್ಗಾವಣೆಗೊಂಡಿದ್ದು ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕುವಂತೆ ಮಾಡಿದೆ. ಅವರು ಯಾರ ಮಾತಿಗೂ ಅಷ್ಟು ಸಲೀಸಾಗಿ ಸೊಪ್ಪು ಹಾಕುತ್ತಿದ್ದಿಲ್ಲ. ತಮ್ಮ ಅಧಿಕಾರದ ಚೌಕಟ್ಟನ್ನ ಮೀರಿ ಯಾವುದೇ ಕೆಲಸಕ್ಕೆ ಮನಸ್ಸು ಮಾಡುತ್ತಿದ್ದಿಲ್ಲ. ಇದೇ ಕಾರಣಕ್ಕೆ ಅವರನ್ನ ಇಷ್ಟು ಬೇಗ ಜಿಲ್ಲೆಯಿಂದ ಎತ್ತಂಗಡಿ ಮಾಡಿರಬಹುದು ಎನ್ನುವ ಗುಸುಗುಸು ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಅದೇನೆ ಇರಲಿ, ಯಾವುದೇ ಪೋಸ್ಟಿಂಗ್ ನೀಡದೇ ಏಕಾಏಕಿ ಜಿಲ್ಲಾಧಿಕಾರಿ ವರ್ಗಾವಣೆಯಾಗಿರುವದು ಸಾಕಷ್ಟು ಅಚ್ಚರಿ ತಂದಿದ್ದಂತು ಸುಳ್ಳಲ್ಲ.
1 comment
ಇದ್ದರೂ ಇರಬಹುದು ಎಕೆಂದರೆ ನಿಷ್ಟೂರ ಅಧಿಕಾರಿಗಳಿಗೆ ನಮ್ಮ ಸರ್ಕಾರದಲ್ಲಿ ಅವಕಾಶವೇ ಇಲ್ಲವಲ್ಲ ಇದು ಎಚ್ಚರಿಕೆ ಗಂಟೆ ಅಷ್ಟೇ