Sunday, April 20, 2025
Homeರಾಜ್ಯಗದಗನಲ್ಲಿ ನಿರ್ಮಿತಿ ಕೇಂದ್ರದ ಇಂಜನೀಯರ್ ಆತ್ಮಹತ್ಯೆ!

ಗದಗನಲ್ಲಿ ನಿರ್ಮಿತಿ ಕೇಂದ್ರದ ಇಂಜನೀಯರ್ ಆತ್ಮಹತ್ಯೆ!

ಗದಗ: ನಿರ್ಮಿತಿ ಕೇಂದ್ರದ‌ ಇಂಜನೀಯರ್ ಒಬ್ಬರು ನಗರದ ಖಾಸಗಿ‌ ಲಾಡ್ಜ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೊಸ ಬಸ್ ನಿಲ್ದಾಣದ ಬಳಿ ಇರುವ ಖಾಸಗಿ ಲಾಡ್ಜ್ ನ ರೂಮ್ ಒಂದರಲ್ಲಿ ಇಂಜನೀಯರ್ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ.

ಶಂಕರಗೌಡ ಪಾಟೀಲ (54) ಆತ್ಮಹತ್ಯೆ ಮಾಡಿಕೊಂಡ ಮೃತ ಇಂಜನೀಯರ್ ಆಗಿದ್ದು, ಗದಗ ನಗರದ ಹಾತಲಗೇರಿ ನಾಕಾ ಬಳಿಯ ನಿವಾಸಿಯಾಗಿದ್ದಾರೆ.‌ ಗದಗ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಇಂಜನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಇಂದು ಬೆಳಿಗ್ಗೆ ಸೈಟ್ ಕಡೆ ಹೋಗಿ ಬರ್ತಿನಿ ಎಂದು ಮನೆಯವರ‌ ಬಳಿ ಹೇಳಿ ಹೋಗಿದ್ದ ಇಂಜನೀಯರ್, ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಗದಗ ಜಿಲ್ಲೆ ರೋಣ ತಾಲೂಕಿನ ನಿರ್ಮಿತಿ ಕೇಂದ್ರದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇನ್ನು ಇಂಜನೀಯರ್ ಆತ್ಮಹತ್ಯೆ ಬಗ್ಗೆ ಅವರ ಸಹೋದರ ಕೃಷ್ಣಗೌಡ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂಜನೀಯರ್ ಗೆ ಸಾಲ‌ ಇದ್ದಿಲ್ಲ. ಆದರೆ ಸಾಕಷ್ಟು ಆಸ್ತಿ ಇದೆ. ನಮ್ಮ ಸಹೋದರ ಸಾಲಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವನೇ ಅಲ್ಲ. ನೇಣು ಹಾಕಿ‌ ಕೊಲೆ ಮಾಡಿದ್ದಾರೆ. ಅದು ಬ್ಯಾಂಕ್ ಸಾಲಕ್ಕೆ ಜಾಮೀನು ಆಗಿದ್ದ ವಿಷಯಕ್ಕಾದ್ರೂ ಆಗಿರಬಹುದು.‌ ಪ್ರಮೋಶನ್ ವಿಚಾರವಾಗಿಯೂ ವ್ಯತ್ಯಾಸ ಆಗಿದೆಯೋ ಗೊತ್ತಿಲ್ಲ. ಒಟ್ನಲ್ಲಿ ಈ‌ ಮೂರು ವಿಷಯಕ್ಕೆ ಸಾವು ಅಗಿರಬಹುದು‌‌ ಅಂತ ಆರೋಪಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರೂಂಗೆ ಪೊಲೀಸರು ನನ್ನನ್ನು ಬಿಡಲಿಲ್ಲ. ಹೀಗಾಗಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಇದೆ. ನಿರ್ಮಿತಿ ಕೇಂದ್ರದ ಬಗ್ಗೆಯೂ ಅನುಮಾನ ಇದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಭೇಟಿ ನಿಡಿ,‌ಪರಿಶೀಲನೆ ನಡೆಸಿದ್ದಾರೆ.‌ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ‌ ಎನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments