Sunday, April 20, 2025
Homeರಾಜ್ಯಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೆತ್ನಿಸಿದ ಪತಿ: ನಂತರ ಮಹಿಳೆ ಮಾಡಿದ್ದೇನು!?

ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೆತ್ನಿಸಿದ ಪತಿ: ನಂತರ ಮಹಿಳೆ ಮಾಡಿದ್ದೇನು!?

ಚಿಕ್ಕೋಡಿ: ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೆತ್ನಿಸಿದ ಪಾಪಿ ಪತಿಯನ್ನ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಉಮರಾಣಿ ಗ್ರಾಮದಲ್ಲಿ ನಡೆದಿದೆ.

ಪತ್ನಿ ಸಾವಿತ್ರಿ ಇಟ್ನಾಳೆ(30) ಶ್ರೀಮಂತ ಇಟ್ನಾಳೆ ಯನ್ನ ಹತ್ಯೆ ಮಾಡಿದ್ದಾಳೆ. ಮಕ್ಕಳು ಮಲಗಿದ ಮೇಲೆ ಕಲ್ಲು ಎತ್ತಿ ಹಾಕಿ ತನ್ನ ಗಂಡನನ್ನ ಹೆಂಡತಿ ಹತ್ಯೆ‌ ಮಾಡಿದ್ದಾಳೆ.

ಇನ್ನು ಮನೆಯಲ್ಲಿ ಶವ ಇದ್ರೇ ಪೊಲೀಸರು ಅರೆಸ್ಟ್ ಮಾಡ್ತಾರೆ ಅಂತಾ ಮಹಿಳೆ ಕತರ್ನಾಕ್ ಐಡಿಯಾ ಮಾಡಿದ್ದಾಳೆ. ತನ್ನೊಬ್ಬಳಿಗೆ ಶವ ಸಾಗಿಸಲು ಆಗಲ್ಲ ಅಂತಾ ತನ್ನ ಗಂಡನ ದೇಹವನ್ನೇ ತುಂಡರಿಸಿದ್ದಾಳೆ. ದೇಹವನ್ನ ಎರಡು ಭಾಗ ತುಂಡರಿಸಿ ಚಿಕ್ಕ ಬ್ಯಾರೆಲ್ ನಲ್ಲಿ ಹಾಕಿ ಸಾಗಾಟ ಮಾಡಿದ್ದಾಳೆ. ಬ್ಯಾರೆಲ್ ಉರುಳಿಸುತ್ತಾ ಶವ ಒಯ್ದು ಪಕ್ಕದ ಗದ್ದೆಗೆ ಹಾಕಿದ್ದಾಳೆ.

ಕೊಲೆ ಎಂದು ಯಾರಿಗೂ ಅನುಮಾನ ಬರಬಾರದೆಂದು ತುಂಡರಿಸಿದ ದೇಹವನ್ನ ಗದ್ದೆಯಲ್ಲಿ ಮತ್ತೆ ಜೋಡಿಸಿದ ರೀತಿಯಲ್ಲಿ ಇಟ್ಟಿದ್ದಾಳೆ. ಕೃತ್ಯಕ್ಕೆ ಬಳಸಿದ್ದ ಬ್ಯಾರೆಲ್ ಸಹ ತೊಳೆದು ಅದನ್ನ ಬಾವಿಗೆ ಎಸೆದಿದ್ದಾಳೆ. ಮತ್ತೆ ಮನೆಗೆ ಬಂದು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆ ಒಂದು ಚೀಲದಲ್ಲಿ ಪ್ಯಾಕ್ ಮಾಡಿ, ಆ ಚೀಲವನ್ನ ಬಾವಿಗೆ ತೆಗೆದುಕೊಂಡು ಹೋಗಿ ಮೇಲೆ ಬರದಂತೆ ಕಲ್ಲು ಕಟ್ಟಿ ಎಸೆದು ವಾಪಾಸ್ ಬಂದಿದ್ದಾಳೆ.

ಇದಷ್ಟೇ ಅಲ್ಲದೇ, ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಬಳಿಕ ತನ್ನ ಮೈಮೇಲಿದ್ದ ಬಟ್ಟೆ ಸುಟ್ಟು ಹಾಕಿ, ಸುಟ್ಟಿದ್ದ ಬೂದಿಯನ್ನ ತಿಪ್ಪೆಗೆ ಎಸೆದಿದ್ದಾಳೆ.ಅಲ್ಲದೇ, ಕೊಲೆಗೆ ಬಳಸಿದ್ದ ಕಲ್ಲು ತೊಳೆದು ತಗಡಿನ ಶೆಡ್ ನಲ್ಲಿ ಬಚ್ಚಿಟ್ಟು, ಗಂಡನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿ ಮನೆಯಲ್ಲಿಟ್ಟಿದ್ದಾಳೆ.

ಇದೇ ವೇಳೆ ಎಚ್ಚರಗೊಂಡ ಮೊದಲ ಮಗಳಿಗೆ, ನಡೆದ ಘಟನೆಯನ್ನ ಎಲ್ಲಿಯೂ ಹೇಳದಂತೆ ತಾಕೀತು ಮಾಡಿದ್ದಾಳೆ.ಒಟ್ನಲ್ಲಿ ಬೆಳಗಾಗುವಷ್ಟರಲ್ಲಿ ಕೊಲೆಯ ಸುಳಿವೇ ಸಿಗದಂತೆ ಮಾಡಿದ್ದಾಳೆ.

ಜಮೀನಿನಲ್ಲಿ ಶವ ಸಿಗ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಖಾಕಿಗೆ ಹೆಂಡತಿ ಮೇಲೆ ಅನುಮಾನ ಬಂದಿದೆ. ನಂತರ ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ತನ್ನಿಂದ ತಪ್ಪಾಗಿದೆ ಕ್ಷಮಿಸಿ ಅಂತಾ ಕಣ್ಣೀರು ಹಾಕಿ ಸತ್ಯಾಂಶವನ್ನ ಬಿಚ್ಚಿಟ್ಟಿದ್ದಾಳೆ. ಕುಡಿಯಲು ಹಣ ಕೊಡಬೇಕು, ಬೈಕ್ ಕೊಡಿಸುವಂತೆ ಪತಿ ಕಿರುಕುಳ ಕೊಡ್ತಿದ್ದನಂತೆ.

ಸಾವಿತ್ರಿ ಮತ್ತು ಶ್ರೀಮಂತ 15 ವರ್ಷದ ಹಿಂದೆ ಮದುವೆಯಾಗಿದ್ದರು. ಮಗಳ ಮೇಲೆ ಎರಗಲೇತ್ನಿಸಿದ್ದನ್ನ ನೋಡಿ ಸಹಿಸಿಕೊಳ್ಳದೇ ಕೊಲೆ ಮಾಡಿದ್ದಾಗಿ ಪತ್ನಿ ಒಪ್ಪಿಕೊಂಡಿದ್ದಾಳೆ. ಮಕ್ಕಳು ಅನಾಥವಾಗ್ತವೆ ಬಿಟ್ಟು ಬಿಡಿ ಎಂದು ಆರೋಪಿ ಸಾವಿತ್ರಿ ಕಣ್ಣೀರು ಹಾಕಿದ್ದು, ಚಿಕ್ಕೋಡಿ ಪೊಲೀಸರು ಬಂಧಿಸಿ,‌ಜೈಲಿಗಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments