13
ರಾಜ್ಯದಲ್ಲಿ ಇನ್ನೂ ಕೂಡ ಅಕ್ರಮ ಪಡಿತರ ಅಕ್ಕಿ ದಂಧೆಗೆ ಕಡಿವಾಣ ಬಿದ್ದಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ, 2017 ರಿಂದ 22 ರವರೆಗೆ ಪಡಿತರ ಸಾಗಾಟದಲ್ಲಿ ಭಾರಿ ಅಕ್ರಮ ನಡೆದಿದೆ ಎನ್ನಲಾಗಿದೆ.
ಮಹಾಲೇಖಪಾಲಕರ (CAG) ವರದಿ ಪ್ರಕಾರ, ಆಟೋದಲ್ಲಿ ಒಂದು ಬಾರಿಗೆ 30 ಟನ್, ಟಾಟಾ ಇಂಡಿಕಾದಲ್ಲಿ ಒಂದು ಬಾರಿಗೆ 24.4 ಟನ್ ಅಕ್ಕಿ ಸಾಗಿಸಲಾಗಿದೆ ಎಂದು ಆಹಾರ ಇಲಾಖೆ ದಾಖಲೆ ನೀಡಿದ್ದು, ಒಂದೇ ಬಾರಿಗೆ 15-20 ಟನ್ ಅಕ್ಕಿ ಹೊತ್ತ ಆಟೋ-ಕಾರುಗಳ ದೊಡ್ಡ ಪಟ್ಟಿಯೇ ಇದೆ ಎಂದು ವರದಿ ಹೇಳಿದೆ.
ಮುಖ್ಯವಾಗಿ “ನೋಂದಾಯಿಸದ ವಾಹನಗಳಲ್ಲಿಯೇ ಅಪಾರ ಪ್ರಮಾಣದ ಅಕ್ಕಿ ಸಾಗಿಸಲಾಗಿದೆ. 1,725 ಟ್ರಿಪ್‌ಗಳು ಇಂತಹ ವಾಹನಗಳಲ್ಲಿ ಈ ದಂಧೆ ನಡೆದಿದೆ” ಎಂದು ವರದಿ ತಿಳಿಸಿದೆ.