ದೊಡ್ಮನೆ ಕುಟುಂಬದಲ್ಲಿ ಹಿರಿಯರಾಗಿರೋ ನಟ ಶಿವರಾಜುಕುಮಾರ ಆರೋಗ್ಯದಲ್ಲಿ ಸಮಸ್ಯೆ ಇದ್ದಿದ್ದರಿಂದ ಅವರು ಹಾಗೂ ಅವರ ಪತ್ನಿ ಗೀತಾ ಅವರ ಜೊತೆ ಅಮೇರಿಕಾಕ್ಕೆ ತೆರಳಿರುವದು ನಿಮಗೆಲ್ಲ ಗೊತ್ತೇ ಇದೆ. ಇದಾದ ಮೇಲೆ ಅಮೆರಿಕದಲ್ಲಿ ನಟ ನಟ ಶಿವಣ್ಣ ಹೇಗಿದ್ದಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು.
ಆದರೆ ಅಭಿಮಾನಿಗಳ ಹಾರೈಕೆ ಪ್ರತಿಫಲಿಸಿದೆ.ಹೊಸವರ್ಷಕ್ಕೆ ರಾಜಕುಮಾರ ಕುಟುಂಬದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಸರ್ಜರಿ ಕುರಿತು ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ಶಿವಣ್ಣ ದಂಪತಿಯೇ ಮಾತನಾಡಿದ್ದಾರೆ. ವಿಡಿಯೋದಲ್ಲಿ ಗೀತಾ ಶಿವರಾಜಕುಮಾರ ಮಾತನಾಡಿದ್ದು, ನಿಮ್ಮ ಆಶೀರ್ವಾದದಿಂದ ಎಲ್ಲ ರಿಪೋರ್ಟ್‌ಗಳು ನೆಗೆಟೀವ್ ಬಂದಿವೆ. ಪೈಥೋಲಾಜಿ ರಿಪೋರ್ಟ್ ಬಗ್ಗೆ ಕಾಯ್ತಾ ಇದ್ವಿ, ಅದು ಕೂಡ ನೆಗೆಟಿವ್ ಬಂದಿದ್ದು ಶಿವಣ್ಣ ಕ್ಯಾನ್ಸರ್ ಫ್ರಿ ಆಗಿದ್ದಾರೆ ಎಂದು ಹೇಳಿದ್ದಾರೆ.