ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಭೂತಪೂರ್ವವಾದ ಗೆಲುವನ್ನು ಸಾಧಿಸಿ ಎರಡನೇ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಶ್ರೀ ಸಿ ಎಸ್ ಷಡಕ್ಷರಿಯವರಿಗೆ ಹಾಗೂ
ಖಜಾಂಚಿಯಾಗಿ ಆಯ್ಕೆಯಾದ ಶಿವರುದ್ರಯ್ಯ ಅವರನ್ನ ಲಕ್ಷ್ಮೇಶ್ವರ ತಾಲೂಕು ಶಾಖೆಯಿಂದ ತಾಲೂಕಿನ ಸಮಸ್ತ ನೌಕರರ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ಹರ್ಲಾಪುರ, ನಿಕಟ ಪೂರ್ವ ಅಧ್ಯಕ್ಷ ಡಿ ಎಚ್ ಪಾಟೀಲ್, ಕಾರ್ಯದರ್ಶಿ ಚಂದ್ರು ನೇಕಾರ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಗುರು ಹವಳದ, ಕಾರ್ಯದರ್ಶಿ ಎಂ ಎ ನದಾಫ್, ಜಿಲ್ಲಾ ಶಿಕ್ಷಕರ ಸಂಘದ ಸದಸ್ಯರಾದ ಎಂ ಎಸ್ ಹಿರೇಮಠ, ಐ ಎ ನೀರಲಗಿ, ಡಿ ಎಲ್ ಪಾಟೀಲ, ಎಫ್ ಸಿ ಪಾಟೀಲ್ ಸೇರಿದಂತೆ ಅನೇಕ ನೌಕರರು ಹಾಜರಿದ್ದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ B.P ಕೃಷ್ಣಗೌಡ ಹಾಗೂ C.S. ಷಡಕ್ಷರಿ ಅವರು ಕಣದಲ್ಲಿದ್ದರು. C.S. ಷಡಕ್ಷರಿ ಅವರು 507 ಮತಗಳನ್ನು ಗಳಿಸಿ ಪ್ರತಿ ಸ್ಪರ್ಧಿ B.P ಕೃಷ್ಣಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ.