ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಮತ್ತೆ ಗುಂಡಿನ ಸದ್ದು ಅಬ್ಬರಿಸಿದೆ. ಮನೆ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದ ನಟೋರಿಯಸ್ ಕ್ರಿಮಿನಲ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಪಾಲಾ ವೆಂಕಟೇಶ್ವರರಾವ್ ಎನ್ನುವ ಅರೋಪಿ, ಧಾರವಾಡದ ನವಲೂರಿನ ಮನೆಯೊಂದಕ್ಕೆ ಕನ್ನ ಹಾಕಿದ್ದನು. ಈ ವೇಳೆ ಅರೋಪಿಯನ್ನ ಬಂಧಿಸಲಾಗಿತ್ತು.ಹೆಚ್ಚಿನ ವಿಚಾರಣೆ ಕರೆದುಕೊಂಡು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಲೆತ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದು ಎರಡೂ ಕಾಲಿಗೆ ಗುಂಡೇಟು ಬಿದ್ದಿದೆ. ಅಲ್ಲದೇ ಇದೇ ವೇಳೆ ಪಿಎಸ್ಐ ಸೇರಿ ಇಬ್ಬರು ಸಿಬ್ಬಂದಿಗಳಿಗೆ ಗಾಯಗಳಾಗಿವೆ.
ಇನ್ನು ಆರೋಪಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದು, 80 ಕ್ಕೂ ಹೆಚ್ಚು ಕಳ್ಳತನದಲ್ಲಿ ಭಾಗಿಯಾಗಿದ್ದನು. ಮೂಲತಃ ಆಂದ್ರ ಪ್ರದೇಶದವನಾಗಿದ್ದು, ಸುಮಾರು ಐದು ರಾಜ್ಯಗಳ ಪೊಲೀಸರಿಗೆ ಈ ನಟೋರಿಯಸ್ ವಾಂಟೆಡ್ ಆಗಿದ್ದನೆಂದು ತಿಳಿದು ಬಂದಿದೆ.
ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆರೋಪಿಯನ್ನ ಶಿಫ್ಟ್ ಮಾಡಲಾಗಿದ್ದು, ಅವಳಿನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ನೀಡಿ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದ್ದಾರೆ.
ಜೂನ್.6 ರಂದು ಇದೇ ವ್ಯಕ್ತಿ ಅಶೋಕ್ ಕದಂಬರ ಅನ್ನೋರ ಮನೆಗೆ ನುಗ್ಗಿ ಬಾಗಿಲು ಒಡೆದು, ಮನೆಯಲ್ಲಿದ್ದ ದಂಪತಿಗಳಿಗೂ ಕೂಡ ಹಲ್ಲೆ ಮಾಡಿದ್ದರು.ಅದೇ ಪ್ರಕರಣದ ಆರೋಪಿ ಇವನೇ ಅನ್ನೋದು ಕೂಡ ಈಗ ತಿಳಿದು ಬಂದಿದೆ.
*ನಟೋರಿಯಸ್ ದರೋಡೆಕೋರರ ಭಯಾನಕ ದೃಶ್ಯ*
ಹೌದು, ಡಕಾಯಿತರು ಮನೆಗೆ ನುಗ್ಗಿ ಹಲ್ಲೆ ಮಾಡಿ ದರೋಡೆ ಮಾಡಿರೋ ಸಿಸಿ ಟಿವಿ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ಜೂನ್ 6 ರಂದು ಅಶೋಕ ಕದಂಬ ಅನ್ನೋರ ಮನೆಗೆ ನುಗ್ಗಿ ದರೋಡೆಕೋರರು ಕ್ರೂರತನದ ಅಟ್ಟಹಾಸ ಮೆರೆದಿದ್ದರು. ಮನೆಯ ಮಾಲೀಕರನ್ನೇ ಹಿಗ್ಗಾ ಮುಗ್ಗಾ ಥಳಿಸಿ ಕೃತ್ಯ ಎಸಗಿದ್ದಾರೆ. ಇಡೀ ಖದೀಮರ ತಂಡ ಒಂದೇ ಕುಟುಂಬದ ಸದಸ್ಯರೆಂದು ತಿಳಿದು ಬಂದಿದೆ. ವಿಡಿಯೋ ವೀಕ್ಷಿಸಲು ಕೆಳಗಿನ ಯೂಟ್ಯೂಬ್ ವೀಕ್ಷಿಸಿ.