ಗದಗ: ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಪಾರ್ಕಿಂಗ್ ಮಾಡಿದ್ದ ಬಸ್ಸಗಳಲ್ಲಿನ ಡಿಸೆಲ್ ಕಳ್ಳತನವಾಗಿರುವ ಘಟನೆ ಗದಗನ ಬೆಟಗೇರಿ KSRTC ಡಿಪೋದಲ್ಲಿ ನಡೆದಿದೆ.
ಡಿ.19 ರ ರಾತ್ರಿ ಈ ಕಳ್ಳತನ ನಡೆದಿದ್ದು, ಬಸ್ಸುಗಳನ್ನ ರಾತ್ರಿ ವೇಳೆ ಪಾರ್ಕ ಮಾಡುವಾಗ ಡಿಸೇಲ್ ಟ್ಯಾಂಕನ್ನು ಫುಲ್ ಮಾಡಿ ಇಡಲಾಗಿತ್ತು.ಆದರೆ ಬೆಳಿಗ್ಗೆ ಚಾಲಕ ಬಂದು ನೋಡಿದಾಗ ಡಿಸೆಲ್ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ.
ಬೆಟಗೇರಿ ಡಿಪೋದಲ್ಲಿನ ಕೆಎ-42.ಎಫ್-1622 ನೇದ್ದರಲ್ಲಿ 200 ಲೀಟರ್, ಕೆಎ-26.ಎಫ್-0902 ನೇದ್ದರಲ್ಲಿ 135 ಲೀಟರ್, ಹಾಗೂ ಕೆಎ-42. ಎಫ್-1346 ನೇದ್ದರಲ್ಲಿ 186 ಲೀಟರ್ ಡಿಸೇಲ್ ಕಳ್ಳತನವಾಗಿದ್ದು, ಒಟ್ಟು ಮೂರು ಬಸ್ಸುಗಳಲ್ಲಿನ, ₹44,806 ರೂ. ಗಳ ಒಟ್ಟು 521. ಲೀಟರ್ ಡಿಸೇಲ್ ನ್ನ ಖದೀಮರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಇನ್ನು ಘಟಕದಲ್ಲಿ ಯಾವುದೇ ಸಿಸಿ ಕ್ಯಾಮರಾಗಳು ಇಲ್ಲದಿರುವದು KSRTC ಘಟಕದ ಭದ್ರತಾಲೋಪಕ್ಕೆ ಸಾಕ್ಷಿಯಾಗಿದೆ.
ಕಳ್ಳತನದ ಪ್ರಕರಣದ ಕುರಿತಂತೆ ಘಟಕದ ವ್ಯವಸ್ಥಾಪಕ ರಾಜಶೇಖರ ಧನ್ಯಾಳ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬೆಟಗೇರಿ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ.