ನರೇಗಲ್ಲ: ನಿತ್ಯ ಜೀವನದಲ್ಲಿ ಅಂಕಿ-ಸಂಖ್ಯೆಗಳಿದಲ್ಲದೆ ಬದುಕಿಲ್ಲ. ಕೇವಲ ವರ್ಗಕೋಣೆಯಲ್ಲಿನ ಗಣಿತ ಕಲಿಕೆಗೆ ಸೀಮಿತವಾಗದೇ ಜೀವನದ ಪ್ರತಿಯೊಂದು ಕ್ಷಣದಲ್ಲೂ ಗಣಿತ ಅಡಗಿದೆ ಎಂದು ಎಸ್ಎವಿವಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಹೇಳಿದರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಸಮೀಪದ ನಿಡಗುಂದಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತವನ್ನು ಕಬ್ಬಿಣದ ಕಡಲೆ ಎನ್ನುವದು ತಪ್ಪು ಕಲ್ಪನೆಯಾಗಿದೆ. ಆಸಕ್ತಿಯಿಂದ ಅಧ್ಯಯನ ಮಾಡಿದಾಗ ಯಾವುದೇ ವಿಷಯವು ಕಷ್ಟವಲ್ಲ. ಮಕ್ಕಳು ಮೊಬೈಲ್ ಗೀಳಿನಿಂದ ದೂರವಿದ್ದು ಕಲಿಕೆಯತ್ತ ಗಮನ ಹರಿಸಿದಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಕೆವಿಬಿಎಂ ಉಚಿತ ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನ ಮೆಣಸಗಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡುವ ಕಾರ್ಯವಾಗಬೇಕು. ತಂದೆ-ತಾಯಿ ಗುರುಗಳ ಪರಿಶ್ರಮ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ಅಧ್ಯಯನ ಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು. ಲಭ್ಯ ಪರಿಕರಣ ಬಳಸಿ ಮೊಬೈಲ್ ದೂರ ಸರಿಸಿ ೩ಎಚ್ ಹೆಡ್, ಹಾರ್ಟ್, ಹ್ಯಾಡ್ ಮೂಲಕ ಉನ್ನತ ಗಣಿತ ಅಧ್ಯಯನ ಮಾಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಮಗ್ಗ ಸ್ಪರ್ದೆ, ಸೂತ್ರ ಹೇಳುವ ಸ್ಪರ್ದೆ, ಗಣಿತದ ಒಗಟುಗಳ ಸ್ಪರ್ದೆಗಳನ್ನ ನಡೆಸಲಾಯಿತು. ಶಾಲಾ ಆಡಳಿತ ಮಂಡಳಿ ಚೇರಮನ್ ಜಗದೀಶ ಕರಡಿ, ಮುಖ್ಯ ಶಿಕ್ಷಕ ಕೆ.ಪಿ. ರಾಠೋಡ, ಎಸ್.ಐ. ದಿಂಡೂರ, ಎಂ.ಬಿ. ಕೊಪ್ಪದ, ಎಚ್.ಬಿ. ಕಟ್ಟಿಮನಿ, ಎಸ್.ವಿ. ಹಳ್ಳಿಕೇರಿ, ಕೆ.ಬಿ. ಗಡಾದ, ಎಸ್.ಬಿ. ಹಿರೇಮಠ, ಎಸ್.ಬಿ. ಅಳೆ ಹೊನ್ನಪ್ಪನವರ, ವಿ.ಎಸ್. ಅರಮನಿ ಇದ್ದರು.