ಲಕ್ಷ್ಮೇಶ್ವರ: ಬೀದಿ ನಾಯಿಗಳನ್ನ ಸೆರೆ ಹಿಡಿಯೋಕೆ ಅಂತ ಕರೆಸಿದ್ದ ತಂಡಕ್ಕೆ ಹಣ ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಎದುರು ಡಾಗ್ ಕ್ಯಾಚಿಂಗ್ ತಂಡದವರು ಧರಣಿ ನಡೆಸುತ್ತಿರುವ ಘಟನೆ ಜರುಗಿದೆ.
ಹೌದು, ಪಟ್ಟಣದಲ್ಲಿ ಮಿತಿಮೀರಿದ್ದ ನಾಯಿಗಳ ಹಾವಳಿ ತಡೆಗಟ್ಟಲು ಪುರಸಭೆಯಿಂದ ನಾಯಿಗಳನ್ನ ಹಿಡಿಯೋಕಂತ ಮಧುರೈನ ರಾಜಕುಮಾರ ಡಾಗ್ ಕ್ಯಾಚಿಂಗ್ ನವರಿಗೆ ಸೂಚಿಸಲಾಗಿತ್ತು.
ಆ ಪ್ರಕಾರ ಸುಮಾರು 4 ದಿನಗಳಿಂದ ಒಟ್ಟು 9 ಜನರ ತಂಡ ಹಾಗೂ ಪುರಸಭೆಯ ಪೌರ ಕಾರ್ಮಿಕರು ಸೇರಿ ಪಟ್ಟಣದಲ್ಲಿ 338 ನಾಯಿಗಳನ್ನು ಹಿಡಿದಿದ್ದಾರೆ. ಆದರೆ ಬಿಲ್ ನೀಡಲು ಪುರಸಭೆಯವರು ವಿಳಂಬ ಧೋರಣೆ ಮಾಡುತ್ತಿದ್ದಾರೆ ಎಂದು ಡಾಗ್ ಕ್ಯಾಚಿಂಗ್ ತಂಡದವರು ಪುರಸಭೆಗೆ ದಿಢೀರ್ ಮುತ್ತಿಗೆ ಹಾಕಿ ತಮ್ಮ ಅಳಲನ್ನು ತೋಡಿಕೊಂಡಿರು.
ಈ ಸಂದರ್ಭದಲ್ಲಿ ರಾಜಕುಮಾರ ಡಾಗ್ ಕ್ಯಾಚಂಗ್ ಮಧುರೈ ತಂಡದ ಮುಖ್ಯಸ್ಥ ರಾಜಕುಮಾರ್ ಮಾತನಾಡಿ, ನಮಗೆ ನಾಯಿ ಹಿಡಿಯಲು ಫೋನ್ ಮೂಲಕ ಕರೆ ಮಾಡಿ ಬರಲು ಹೇಳಿದರು. ಆ ಕಾರಣದಿಂದ ತಮಿಳುನಾಡಿನಿಂದ ಸುಮಾರು 9 ಜನರು ಬಂದಿದ್ದೇವೆ. ಅಲ್ಲದೆ ಪ್ರತಿ ನಾಯಿಗೆ 400 ರೂಪಾಯಿ ನೀಡುತ್ತೇವೆ ಎಂದು ಹೇಳಿದ್ದರು. ಒಟ್ಟು 338 ನಾಯಿಗಳನ್ನು ಹಿಡಿದಿದ್ದೇವೆ ಆದರೆ ನಮಗೆ ಈವರೆಗೂ ಬಿಲ್ ಕೊಡಲು ವಿಳಂಬ ಮಾಡುತ್ತಿದ್ದಾರೆ. ಇಂದು ಕೊಡುತ್ತೇವೆ, ನಾಳೆ ಕೊಡುತ್ತೇವೆ ಎನ್ನುತ್ತಾ ಅಂತ ಅಲೆದಾಡಿಸುತ್ತಿದ್ದಾರೆ. ಇದೆ ರೀತಿ ಬಿಲ್ ನೀಡಲು ವಿಳಂಬ ಮಾಡಿದರೆ ಇಲ್ಲಿಯೇ ನಮ್ಮ ಪ್ರಾಣ ಬಿಡುತ್ತೇವೆ ಎಂದು ಎಚ್ಚರಿಸಿದರು.
ಇದೇ ವೇಳೆ ಪ್ರಾಣಿ ದಯಾ ಸಂಘದವರು ಮಾತನಾಡಿ, ನಾಯಿ ಹಿಡಿಯುವ ಕುರಿತು ಪುರಸಭೆ ಅಧ್ಯಕ್ಷರಿಗೆ ಹಾಗೂ ಸದಸ್ಯರ ಗಮನಕ್ಕೆ ತರದೇ ಪಶು ವೈದ್ಯಾಧಿಕಾರಿಗಳಿಗೆ ಸಹ ತಿಳಿಸಿಲ್ಲ.ನಾಯಿಗಳನ್ನ ಸೆರೆ ಹಿಡಿಯುವಾಗ, ಅವುಗಳ ಜೀವಕ್ಕೆ ಹಾನಿಯುಂಟಾದರೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದರು.
“ಧ್ವನಿ ವರ್ಧಕದ ಮೂಲಕ ಹಾಗೂ ವಾಟ್ಸಪ್ ಗ್ರೂಪ್ ಗಳ ಪುರಸಭೆ ಅಧ್ಯಕ್ಷೆ,ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಮೂಲಕ ನಾಯಿ ಹಿಡಿಯುವ ಕಾರ್ಯಾಚರಣೆ ಮಾಹಿತಿ ನೀಡಿದ್ದೇವೆ.”
ಮಹೇಶ ಹಡಪದ, ಪುರಸಭೆ ಮುಖ್ಯಾಧಿಕಾರಿಗಳು.