ಮುಂಡರಗಿ:ತಾಲೂಕಿನ ಹಾರೊಗೇರಿ ಗ್ರಾಮ ಪಂಚಾಯಿತಿಯಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಯಾರೂ ಸಹ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆ ಮಾರುತಿ ಮಡಿಯಮ್ಮನವರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದರು. ಚುನಾವಣಾ ಅಧಿಕಾರಿಗಳಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಶ್ವನಾಥ ಹೊಸಮನಿ ಅವರು ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಹದೇವಕ್ಕ ಹಳ್ಳಿ, ಮಾಜಿ ಅಧ್ಯಕ್ಷರಾದ ರವೀಂದ್ರ ಜೀವಿ, ಗ್ರಾಮದ ಹಿರಿಯರಾದ ಪುಲಿಕೇಶ ಗೌಡ ಪಾಟೀಲ್, ಗಣೇಶ್ ಭರಮಕ್ಕನವರ, ಅಮರೇಶ ಹಿರೇಮಠ, ಬಸವರಾಜ ಕಣವಿ, ಬಸಿರಸಾಬ ವಡ್ಡಟ್ಟಿ, ಮಾಬುಸಾಬ ಹರ್ಲಾಪುರ, ಪುಲಕೇಶಗೌಡ ಪಾಟೀಲ್ ಸೇರಿದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಹೇಶ ಅಲ್ಲಿಪುರ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು