ಗದಗ: ಹಿಟ್ ಆ್ಯಂಡ್ ರನ್ ಗೆ ಓರ್ವ ವ್ಯಕ್ತಿ ಬಲಿಯಾಗಿರುವ ಘಟನೆ ಗದಗ ತಾಲೂಕಿನ ಹರ್ಲಾಪೂರ ಕ್ರಾಸ್ ಬಳಿ ನಡೆದಿದೆ.
ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿರಬಹುದು ಎನ್ನಲಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅಪಘಾತದ ತೀವ್ರತೆಗೆ ವ್ಯಕ್ತಿಯ ದೇಹ ಮಾಂಸದ ಮುದ್ದೆಯಾಗಿ ಅಪ್ಪಚ್ಚಿಯಾಗಿದ್ದು, ವ್ಯಕ್ತಿ ಯಾರೆಂದು ಗುರುತಿಸಲು ಸಹ ಕಷ್ಟಸಾಧ್ಯವಾಗಿದೆ.
ಸ್ಥಳಿಯರು ಹೇಳುವ ಪ್ರಕಾರ, ನಾಲ್ಕೈದು ದಿನಗಳಿಂದ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡವನಂತೆ ಹೆದ್ದಾರಿಯಲ್ಲಿ ಅತ್ತಿಂದಿತ್ತ ವ್ಯಕ್ತಿಯೊಬ್ಬ ಸಂಚರಿಸುತ್ತಿದ್ದ. ಬಹುಶಃ ಇತನೇ ಅಪಘಾತಕ್ಕೆ ಬಲಿಯಾಗಿರಬಹುದೆಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.