Home » News » MRI & CT ಫ್ರೀ ಸ್ಕ್ಯಾನ್ ಗೆ ಬಿತ್ತು ಬ್ರೆಕ್! ಇನ್ಮುಂದೆ ಬೇಕಾಬಿಟ್ಟಿ ಸ್ಕ್ಯಾನ್ ಇಲ್ಲ! ಬಡರೋಗಿಗಳ ಜೀವದ ಜೊತೆ ಸರ್ಕಾರದ ಚೆಲ್ಲಾಟ!

MRI & CT ಫ್ರೀ ಸ್ಕ್ಯಾನ್ ಗೆ ಬಿತ್ತು ಬ್ರೆಕ್! ಇನ್ಮುಂದೆ ಬೇಕಾಬಿಟ್ಟಿ ಸ್ಕ್ಯಾನ್ ಇಲ್ಲ! ಬಡರೋಗಿಗಳ ಜೀವದ ಜೊತೆ ಸರ್ಕಾರದ ಚೆಲ್ಲಾಟ!

by CityXPress
0 comments

ಗದಗ: ಫ್ರೀ ಇದೆ ಅಂತ ಸ್ಕ್ಯಾನ್ ಮಾಡಿಸೋಕೆ ಸರ್ಕಾರಿ ಆಸ್ಪತ್ರೆಗೆ ಹೋಗ್ತಿದ್ದಿರಾ..? ಹಾಗಾದ್ರೆ…ಸ್ವಲ್ಪ ವೇಟ್ ಮಾಡಿ..ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸ್ಕ್ಯಾನ್ ಸೇವೆ ಇರೋದಿಲ್ಲ. ಹಾಗೇನಾದ್ರೂ ಉಚಿತವಾಗಿಯೇ ಬೇಕು ಅಂದ್ರೆ, ನಾಲ್ಕಾರು ಗಂಟೆ ಕಾಯಬೇಕು, ಅದಕ್ಕೆ ಆದ ಕೆಲವೊಂದಿಷ್ಟು ನಿಯಮಗಳಿವೆ, ಅದನ್ನೆಲ್ಲ ಮಾಡಿ ಮುಗಿಸಿದರೆ ಮಾತ್ರ ನಿಮಗೆ ಸ್ಕ್ಯಾನ್ ಫ್ರೀ ಆಗುತ್ತೆ. ಇಲ್ಲ ಅಂದ್ರೆ ಸರ್ಕಾರಿ ದರ ಕೊಟ್ಟು ನೀವು ಸ್ಕ್ಯಾನ್ ಮಾಡಿಸಬೇಕು.

ಹೌದು, ಗದಗನ ಜೀಮ್ಸ್ ಆಸ್ಪತ್ರೆ ಸೇರಿದಂತೆ, ರಾಜ್ಯದ 15 ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಹಾಗೂ 05 ಜಿಲ್ಲಾಸ್ಪತ್ರೆಗಳಲ್ಲಿ MRI ಸ್ಕ್ಯಾನ್ ಮಷಿನ್ ಗಳನ್ನ 2017-18 ರಿಂದ ಅಳವಡಿಸಲಾಗಿದೆ. ಅಲ್ಲಿಂದ ಇಲ್ಲಿವರೆಗೂ ಸರ್ಕಾರಿ ಆಸ್ಪತ್ರೆಗೆ ಬರುವ ಬಡರೋಗಿಗಳು ತಮ್ಮ ಖಾಯಿಲೆಗೆ ಅನುಗುಣವಾಗಿ CITY & MRI ಸ್ಕ್ಯಾನ್ ಗಳನ್ನ “ಉಚಿತವಾಗಿ” ಮಾಡಿಸುತ್ತಾ ಬಂದಿದ್ದರು. ಖಾಸಗಿ ಸಹಭಾಗಿತ್ವ PPP ಮಾದರಿಯಲ್ಲಿ ಈ ಯೋಜನೆಯನ್ನ ಅನುಷ್ಠಾನಗೊಳಿಸಲಾಗಿತ್ತು.
ರೋಗಿಗಳಿಗೆ ಉಚಿತವಾಗಿ ಸೇವೆ ನೀಡಿ, ನಂತರ‌ ಖಾಸಗಿ ಸಹಭಾಗಿತ್ವದವರು ಸರ್ಕಾರದಿಂದ ಅದರ ಮೊತ್ತವನ್ನ ಭರಿಸಿಕೊಳ್ಳುತ್ತಿದ್ದರು. ಇದರಿಂದ ಮಧ್ಯಮ ಹಾಗೂ ಬಡ ವರ್ಗದವರಿಗೆ ಸಾಕಷ್ಟು‌ ಅನುಕೂಲವಾಗಿತ್ತು.

ಆದರೆ ಇದೀಗ ಆ ಯೋಜನೆಗೆ ಆರೋಗ್ಯ ಇಲಾಖೆ ಅವೈಜ್ಞಾನಿಕ ನೆಪವೊಡ್ಡಿ ಹೊಸ ನಿಯಮ ಜಾರಿ ಮಾಡಿದೆ.ಇದರಿಂದ ಖಾಸಗಿ ಸ್ಕ್ಯಾನ್ ಸೆಂಟರ್ ಗಳ ದುಪ್ಪಟ್ಟು ದುಬಾರಿ ದರ, ಬಡವರ್ಗಕ್ಕೆ ಸಾಕಷ್ಟು ಹೊರೆಯಾಗುವದಲ್ಲದೇ, ಸ್ಕ್ಯಾನ್ ಮಾಡಿಸುವದೇ ಬೇಡ ಅಂತ ಅದೆಷ್ಟೋ ಬಡರೋಗಿಗಳು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಂಡ ಉದಾಹರಣೆಗಳೂ ಸಹ ಸಾಕಷ್ಟಿವೆ.

ಈ ಮಧ್ಯೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಯೋಜನೆಯನ್ನ ಇನ್ನೂ ಉತ್ತಮವಾಗಿ ಅನುಷ್ಠಾನಗೊಳಿಸುವ ಉದ್ದೇಶ ಅಂತ ಹೇಳಿ ಅವೈಜ್ಞಾನಿಕ ನಿಯಮವೊಂದನ್ನ ಜಾರಿ ಮಾಡಿದೆ.

banner

ಅನಗತ್ಯವಾಗಿ ರೋಗಿಗಳನ್ನ ಸ್ಕ್ಯಾನ್ ಗೆ ಒಳಪಡಿಸುತ್ತಿರುವದು, ಒಂದೇ ರೋಗಿಗೆ ಅಗತ್ಯತೆ ಇಲ್ಲದಿದ್ದರೂ Multiple Scans ಮಾಡಿಸಿರುವದು, ಸ್ಕ್ಯಾನ್ ಗೆ ಸಂಬಂಧಿಸಿದ ಪ್ರಯೋಗಾಲಯದ ಪರೀಕ್ಷೆಗಳುನ್ನ ಮಾಡಿಸದೇ ರೆಫೆರಲ್ ನೀಡಿರುವದು, ತಮ್ಮ ತಜ್ಞತೆಗೆ ಸಂಬಂಧವಿಲ್ಲದ ಸ್ಕ್ಯಾನ್ ಗೆ Referral ನೀಡಿರುವದು, ಹೀಗೆ ಇತ್ಯಾದಿ ಕಾರಣಗಳನ್ನ ನೀಡಿ, ಈ ಯೋಜನೆಯಲ್ಲಿ ಶಿಸ್ತನ್ನು ತರುತ್ತೇವೆ ಅಂತ ಪ್ರತಿ ಸ್ಕ್ಯಾನ್ ಗೂ ಸರ್ಕಾರಿ ದರ ಅಂತ ನಿಗದಿ ಮಾಡಿ ಬಡಜನರ ಪ್ರಾಣದ ಜೊತೆ ಚೆಲ್ಲಾಟವಾಡೋಕೆ ಹೊರಟಿದೆ.

ಇನ್ನು ABRK ಅನುಮತಿ ಸಿಕ್ರೆ ಮಾತ್ರ ಉಚಿತ ಸ್ಕ್ಯಾನ್, ಇಲ್ಲವಾದ್ರೆ ಹಣ ಭರಿಸಬೇಕು ಎಂಬ ನಿಯಮದಿಂದ ರೋಗಿಗಳು ಪರದಾಟ ಅನುಭವಿಸುವಂತಾಗಿದೆ. ಇದರಿಂದ ಗದಗ ಜೀಮ್ಸ್ ಸೇರಿದಂತೆ ರಾಜ್ಯದ ಅನೇಕ ಆಸ್ಪತ್ರೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ಪರದಾಡುವಂತಾಗಿದೆ.ಇತ್ತ ಗಂಭೀರ ಸಮಸ್ಯೆ ಇದ್ದ ರೋಗಿಗಳ ಸ್ಥಿತಿ ದೇವರಿಗೇನೆ ಪ್ರೀತಿ ಅನ್ನುವಂತಾಗಿದ್ದು, ಗಂಭೀರ ಸಮಸ್ಯೆ ಇದ್ರೂ‌ ಸಹ ABRK (ಉಚಿತ) ಅನುಮತಿಗೆ ಕನಿಷ್ಟ 2 ರಿಂದ 4 ಗಂಟೆ ಕಾಯಲೆಬೇಕಾದ ಅನಿವಾರ್ಯತೆ ಎದುರಾಗಿದೆ. BPL ಹಾಗೂ ಅಂತ್ಯೋದಯ ಕಾರ್ಡ ಯಾವುದೇ ಸೌಲಭ್ಯಗಳಿದ್ರೂ, ABRK ಅನುಮತಿ ನೀಡುವವರೆಗೂ ರೋಗಿಯು ತನ್ನ ಉಚಿತ ಸ್ಕ್ಯಾನ್ ಗಾಗಿ ಕಾಯಬೇಕಾಗಿದೆ.

ಇಲ್ಲವಾದ್ರೆ, CITY SCAN ಗೆ ₹2000/- ಹಾಗೂ MRI SCAN ಗೆ ₹3.500/- ರೂ. ಹಣ ನೀಡಿ ಸ್ಕ್ಯಾನ್ ಮಾಡಿಸಿಕೊಳ್ಳಬೇಕಾಗಿದೆ.ಇನ್ನು ಈ ರೀತಿಯ ಅವೈಜ್ಞಾನಿಕ ನಿಯಮಕ್ಕೆ ರೋಗಿಗಳು ಪರದಾಟ ಅನುಭವಿಸುವಂತಾವಗಿದೆ.

ಇನ್ನು ABRK ಮೂಲಕ ರೋಗಿಯು ಅದೇ ಸರ್ಕಾರಿ ಆಸ್ಪತ್ರೆಲಿ ಅರ್ಜಿ ಹಾಕಬೇಕು.ಪರಿಣಿತರ ವೈದ್ಯರ ತಂಡ ಈ ರೋಗಿಗೆ ಇಲ್ಲಿನ ವೈದ್ಯರು ಬರೆದಿರುವ ಸ್ಕ್ಯಾನ್ ಅವಶ್ಯಕತೆ ಇದೆಯೋ ಇಲ್ಲವೋ? ಎಂದು ಅವರು ಪರಿಶೀಲಿಸಿ, ಅಪ್ರುಲ್ ಕೊಡುತ್ತಾರೆ. ಆನಂತರ ನಿಮಗೆ ಉಚಿತ ಸ್ಕ್ಯಾನ್ ಸೌಲಭ್ಯ ಸಿಗಲಿದೆ. ಅಕಸ್ಮಾತ್, ನಿಮ್ಮನ್ನ ಪರೀಕ್ಷಿಸಿದ ವೈದ್ಯರು, ಸ್ಕ್ಯಾನ್ ಬರೆದುಕೊಟ್ಟ ನಂತರವೂ, ABRK ಯಲ್ಲಿ ಅಪ್ರುಲ್ ಆಗದೇ‌ ಇದ್ದಲ್ಲಿ, ನಿಮ್ಮನ್ನು ನೋಡಿದ ವೈದ್ಯರೇ ಸ್ಕ್ಯಾನ್ ವೆಚ್ಚವನ್ನ ಭರಿಸಬೇಕಾಗಿದೆ ಎಂದು ಹೇಳಲಾಗ್ತಿದೆ.

ಹೀಗೆ ವೈದ್ಯರಿಗೂ ಸೇರಿದಂತೆ, ರೋಗಿಗಳಿಗೂ ಈ ಹೊಸ ನಿಯಮ ಪರದಾಟ ಪಡುವಂತಾಗಿದ್ದು, ಸರ್ಕಾರ ತನ್ನ ಗ್ಯಾರಂಟಿಗಳಿಗೆ ಹಣ ಹೊಂದಿಸೋ ಸಲುವಾಗಿ, ಈ ರೀತಿ ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿ, ಸಾಮಾನ್ಯರ ಜೀವನಕ್ಕೆ ಆರ್ಥಿಕವಾಗಿ ಬರೆ ಹಾಕುವ ಕೆಲಸ ಮಾಡ್ತಿದೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.

” ರೋಗಿಗೆ ಗಂಭೀರತೆ ಇರಲಿ ಅಥವಾ ಇರದೇ ಇರಲಿ. ಆತನಿಗೆ ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆ ನಿರಂತರ ಇದ್ದೇ ಇರುತ್ತದೆ. ಸ್ಕ್ಯಾನ್ ಸಲುವಾಗಿ ರೋಗಿಗೆ ಚಿಕಿತ್ಸೆ ಕೊಡುವದನ್ನ ನಾವು ತಡ ಮಾಡುವದಿಲ್ಲ. ಅಲ್ಲದೇ, ABRK ಮೂಲಕ ಅಪ್ರುವಲ್‌ ಪಡೆಯೋದಕ್ಕೂ ಸಹ ಬಹಳಷ್ಟು ಸಮಯ ಹಿಡಿಯುವದಿಲ್ಲ”

ಡಾ.ಬಸವರಾಜ ಬೊಮ್ಮನಹಳ್ಳಿ. ಜೀಮ್ಸ್ ನಿರ್ದೇಶಕರು.‌ಗದಗ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb