ಗದಗ: ಬಿಜೆಪಿ ಗದಗ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಾಗೂ ದ್ರಾಕ್ಷಾರಸ ಮಂಡಳಿಯ ಮಾಜಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ ಅವರ ಅಂತ್ಯಕ್ರಿಯೆ ಹೊಂಬಳ ರಸ್ತೆಯ ರುದ್ರಭೂಮಿಯಲ್ಲಿ ಜೈನ ಸಮಾಜದ ವಿಧಿವಿಧಾನಗಳ ಪ್ರಕಾರ ಭಾನುವಾರ ನಡೆಯಿತು.
ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಸೇರಿದಂತೆ ಹಲವು ಮುಖಂಡರು ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆಯ ಯಾತ್ರೆಯಲ್ಲಿ ಹೆಗಲು ನೀಡಿದರು.
ಮಾಜಿ ಸಂಸದ ವಿಜಯ ಸಂಕೇಶ್ವರ, ಎಸ್.ಎಚ್.ಶಿವನಗೌಡ್ರ,ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಶ್ರೀಕಾಂತ ಖಟವಟೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಜಗನ್ನಾಥ ಭಾಂಡಗೆ, ಸಂಗಮೇಶ ದುಂದೂರ, ಎಂ.ಎಂ.ಹಿರೇಮಠ, ಸೇರಿದಂತೆ ಜೈನ ಸಮಾಜದ ಗುರು ಹಿರಿಯರು ಹಾಗೂ ಅನೇಕ ಬಂಧುಬಳಗ, ಆಪ್ತರು ಭಾಗಿಯಾಗಿದ್ದರು.