ಗದಗ: ಗದಗ ಜಿಲ್ಲೆಗೆ ಇಂದು ಸಿ.ಎಂ. ಸಿದ್ದರಾಮಯ್ಯ ಭೇಟಿ ನೀಡಿದ್ರು. ಜೊತೆಗೆ ಡಿಸಿಎಂ ಡಿ. ಕೆ. ಶಿವಕುಮಾರ ಸಹ ಗದಗ ತಾಲೂಕಿನ ಹರ್ಲಾಪುರ ಗ್ರಾಮಕ್ಕೆ ಆಗಮಿಸಿದ್ರು.
ಹರ್ಲಾಪುರ ಗ್ರಾಮದ ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ದೇವರ ಮೂರ್ತಿ ಪ್ರತಿಷ್ಟಾಪನೆ ಹಾಗೂ ನೂತನ ದೇವಸ್ಥಾನ ಉದ್ಘಾಟಿಸಿದರು.
ರಿಬ್ಬನ್ ಕತ್ತರಿಸುವ ಮೂಲಕ ದೇವಸ್ಥಾನ ಉದ್ಘಾಟಿಸಿದ ಸಿಎಂ ಹಾಗೂ ಡಿಸಿಎಂ ದೇವರ ದರ್ಶನ ಪಡೆದರು. ನಂತರ ದೇವಸ್ಥಾನದಿಂದ ಹೊರಬಂದ ತಕ್ಷಣ ಡಿಸಿಎಂ ಡಿ.ಕೆ.ಶಿವಕುಮಾರ, ದೇವಸ್ಥಾನದ ಪುರೋಹಿತರು ನೀಡಿದ್ದ, ಆಶಿರ್ವಾದದ ಪ್ರಸಾದ ತಟ್ಟೆಗೆ ಕೈ ಹಾಕಿದರು.
ಹಣ್ಣುಗಳಿರುವ ಪ್ರಸಾದ ತಟ್ಟೆಗೆ ಕೈ ಹಾಕಿ, ಡಿಕೆಶಿ ಸೇಬು ಹಣ್ಣನ್ನು ತಿನ್ನುತ್ತಾ ನಿಂತರೆ, ಸಿಎಂ ಸಿದ್ಧರಾಮಯ್ಯ ಮುಂದೆ ಸಾಗಿದರು. ಹಿಂದೆ ಆ್ಯಪಲ್ ತಿನ್ನುತ್ತಾ ನಿಂತ ಡಿಕೆಶಿ ಅರ್ಧ ಹಣ್ಣು ತಿಂದು ಉಳಿದ ಅರ್ಧ ಹಣ್ಣನ್ನ ಬೀಸಾಕಿದರು.