9
ರೈತರಿಗೆ ಅಡಮಾನ ರಹಿತವಾಗಿ ನೀಡಲಾಗುವ ಸಾಲವನ್ನು RBI 2 ಲಕ್ಷಕ್ಕೆ ಹೆಚ್ಚಿಸಿದೆ. ಇದು ಬರುವ 2025 ರ ಜನೇವರಿ.1 ರಿಂದಲೇ ಜಾರಿಗೆ ಬರಲಿದೆ.
ಈ ಮೊದಲು ಅಡಮಾನವಿಲ್ಲದೇ ರೂ.1.6 ಲಕ್ಷವರೆಗೆ ಸಾಲ ನೀಡಲಾಗುತ್ತಿತ್ತು. ಇದೀಗ RBI ನ ಈ ಹೊಸ ನಿರ್ದೇಶನದ ಮೂಲಕ, ರೈತರು ಪಡೆಯುವ 2 ಲಕ್ಷ ವರೆಗಿನ ಸಾಲಕ್ಕೆ ಅಡಮಾನ ಅಥವಾ ಇತರ ಅಗತ್ಯ ದಾಖಲೆಗಳ ಮಿತಿಯನ್ನು ತೆಗೆದುಹಾಕಲು ಬ್ಯಾಂಕ್‌ಗಳಿಗೆ ಸೂಚಿಸಿದೆ.
ಇದರಿಂದಾಗಿ ಸಣ್ಣ ಹಾಗೂ ಅತಿ ಸಣ್ಣ ಸೇರಿ 86% ರೈತರಿಗೆ ನೆರವಾಗಲಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.