ಬೆಳಗಾವಿ:ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟದ ವೇಳೆ ಲಾಠಿ ಚಾರ್ಜ ವಿಚಾರಕ್ಕೆ ಸಂಬಂಧಿಸಿದಂತೆ, ಜಯಮೃತುಂಜಯ ಸ್ವಾಮೀಜಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಸಿಎಂ ಸಿದ್ದರಾಮಯ್ಯ ನಮ್ಮ ಮನವಿ ಸ್ವೀಕರಿಸಬೇಕೆಂದು ನಾವು ಸಿಎಂಗೆ ಕರೆ ನೀಡಿದ್ದೆವು. ಆದರೆ ಸಿಎಂ ನಮ್ಮ ಹೋರಾಟಕ್ಕೆ ಸ್ಪಂದನೆ ನೀಡದ ಹಿನ್ನಲೆ ಸುವರ್ಣ ಸೌಧ ಮುತ್ತಿಗೆ ಹಾಕಲು ಮುಂದಾದೆವು. ನಮ್ಮ ಹೋರಾಟ ಶಾಂತಿಯುತವಾಗಿಯೇ ನಡೆಯುತ್ತಿತ್ತು. ಸಿಎಂ ಅವರು ಹೋರಾಟದ ವೇದಿಕೆಗೆ ಬಂದು ಸ್ಪಷ್ಟ ಭರವಸೆ ನೀಡಿ ಅಂತಾ ಕೇಳಿಕೊಂಡಿದ್ದೇವು.
ಆದರೆ ಸಿಎಂ ಬರದೇ ಸರ್ಕಾರದ ಪರವಾಗಿ 3 ಸಚಿವರನ್ನ ಕಳಿಸಿದ್ದರು. ಹೀಗಾಗಿ ಸಿಎಂ ಬರುವವರೆಗೂ ನಾವು ಹೋರಾಟ ಕೈ ಬಿಡಲ್ಲ ಎಂದು ಪಟ್ಟು ಹಿಡಿದಿದ್ದೆವು. ಹೀಗಾಗಿ ಸಿಎಂ ಇರುವಲ್ಲಿಯೇ ಸುವರ್ಣಸೌಧಕ್ಕೆ ಹೋಗಲು ಯತ್ನಿಸಿದ್ದೇವೆ. ನಮ್ಮ ಟ್ರ್ಯಾಕ್ಟರ ಹಾಗೂ ಹೋರಾಟಕ್ಕೆ ಬರುವ ಹೋರಾಟಗಾರರನ್ನ ತಡೆದು ಹೋರಾಟಕ್ಕೆ ಬರುವವರಿಗೆ ನಿರ್ಭಂದ ಹೇರಿದರು.
ಇದನ್ನೆಲ್ಲ ನೋಡಿದಾಗ ಗೊತ್ತಾಗುತ್ತೆ.ನಮ್ಮ ಹೋರಾಟದಿಂದ ಸಿಎಂ ಹತಾಷರಾಗಿದ್ದಾರೆ.ಸಿಎಂ ಹಾಗೂ ಪೋಲಿಸರು ಪ್ರೀ ಪ್ಲ್ಯಾನ ಮಾಡಿಸಿ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಈವರೆಗೂ ಲಿಂಗಾಯತರ ಮೇಲೆ ಯಾವ ಸರ್ಕಾರ ಕೂಡಾ ಹಲ್ಲೆ ಮಾಡಿಲ್ಲ.
ಈ ಸರ್ಕಾರ ನಮ್ಮ ಮೇಲೆ ಹಲ್ಲೆ ಮಾಡಿದೆ. ನಮ್ಮ ಮೇಲೆ ಗೋಲಿಬಾರ್ ಮಾಡಲು ಸಹ ಈ ಸರ್ಕಾರ ಹೇಸುವುದಿಲ್ಲ. ನಿಮ್ಮ ಸರ್ಕಾರದಿಂದ
ಮೀಸಲಾತಿ ಕೊಡಲು ಆಗುವುದಿಲ್ಲ ಎಂದಾದರೆ ಹೇಳಿ, ನಮಗೆ ಯಾರು ನ್ಯಾಯ ಒದಗಿಸುತ್ತಾರೆ ಆ ಸರ್ಕಾರ ತರುತ್ತೇವೆ ಎಂದು ಸರ್ಕಾರದ ವಿರುದ್ಧ ಸ್ವಾಮಿಜಿ ಕಿಡಿ ಕಾರಿದ್ದಾರೆ.
ಇದೇ ಡಿಸೆಂಬರ್ 12 ನೇ ತಾರೀಖು ಪ್ರತಿ ಗ್ರಾಮದ ರಸ್ತೆ ತಡೆಯುವ ಮೂಲಕ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ. 2ಎ ಮೀಸಲಾತಿಗಾಗಿ ನಮ್ಮ ಹೋರಾಟ ಎಂದಿಗೂ ನಿಲ್ಲಿವುದಿಲ್ಲ ಎಂದು ಸ್ವಾಮಿಜಿ ಮತ್ತೊಮ್ಮೆ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.