ಗದಗ: ಸಾರಿಗೆ ಸಂಸ್ಥೆಯ ಕಾರ್ಗೋ ಪಾರ್ಸಲ್ ಮೂಲಕ,ಗದಗ ನಗರದ ಮೊಬೈಲ್ ಅಂಗಡಿಯ ಬ್ರ್ಯಾಂಚ್ ವ್ಯವಸ್ಥಾಪಕರೊಬ್ಬರು ರಾಣೆಬೆನ್ನೂರಿನಲ್ಲಿರುವ ತಮ್ಮ ಮತ್ತೊಂದು ಶಾಖೆಯಿಂದ (ಮತ್ತೊಂದು ಮೊಬೈಲ್ ಅಂಗಡಿ) ಅತ್ಯಂತ ದುಬಾರಿ ಮೊತ್ತದ ಮೊಬೈಲ್ ಒಂದನ್ನ ಪಾರ್ಸಲ್ ಮೂಲಕ ತರಿಸಿಕೊಂಡಿದ್ದಾರೆ. ಆದರೆ 40 ದಿನಗಳಾದರೂ ದುಬಾರಿ ಮೊಬೈಲ್, ಬ್ರ್ಯಾಂಚ್ ಮ್ಯಾನೇಜರ್ ಕೈ ಸೇರಿಲ್ಲ. ಇದರಿಂದ ಆಕ್ರೋಶಗೊಂಡಿರೋ ಮೊಬೈಲ್ ಅಂಗಡಿ ವ್ಯವಸ್ಥಾಪಕ, ಇದಕ್ಕೆ ಕಾರಣರಾದ ಬಸ್ ನಿರ್ವಾಹಕ ಮತ್ತು ಕಾರ್ಗೋ ಸಿಬ್ಬಂದಿಗಳ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಹೌದು, ಅಕ್ಟೋಬರ್ 31 ರಂದು ಮಧ್ಯಾಹ್ನ, 12-25 ಗಂಟೆ ಸುಮಾರಿಗೆ ರಾಣೆಬೆನ್ನೂರಿನಲ್ಲಿರುವ ಮೊಬೈಲ್ ಅಂಗಡಿಯವರು, *1,19,900* ರೂ. ಮೌಲ್ಯದ ಆ್ಯಪಲ್ ಕಂಪನಿಯ ಕಪ್ಪು ಬಣ್ಣದ, 128 ಜಿಬಿ ಸ್ಟೋರೇಜ್ ಇರುವ ಐ-ಫೋನ್ 16 ಪ್ರೋ ಫೋನನ್ನು, KSRTC ಯೊಂದಿಗೆ ಒಪ್ಪಂದದ ಮೇರೆಗೆ ಕೆಲಸ ಮಾಡುವ ‘ನಮ್ಮ ಕಾರ್ಗೋ ಪಾರ್ಸಲ್ ಸರ್ವಿಸ್’ ಸಂಸ್ಥೆಯ ರಾಣೆಬೆನ್ನೂರಿನ ಶಾಖೆಯಿಂದ (ಬಸ್ ಮುಖಾಂತರ) ಗದಗನಲ್ಲಿರುವ ಮೊಬೈಲ್ ಅಂಗಡಿ ಮ್ಯಾನೇಜರ್ ಗೆ ಕಳಿಸಿದ್ದಾರೆ. ಮಧ್ಯಾಹ್ನ 12-45 ಕ್ಕೆ ಇಟ್ಟ ಮೊಬೈಲ್ ಅಬ್ಬಬ್ಬಾ ಅಂದ್ರು,ರಾತ್ರಿ 6-30 ರಿಂದ 7 ಗಂಟೆಗೆ ಬಂದು ತಲುಪಬೇಕು. ಆದರೆ ಪಾರ್ಸಲ್ ಇಟ್ಟಿದ್ದ ಬಸ್ ಬಂದಿತೇ ವಿನಃ, ಅದರಲ್ಲಿರುವ ವ್ಯವಸ್ಥಾಪಕನಿಗೆ ಸೇರಬೇಕಾದ ಮೊಬೈಲ್ ಪಾರ್ಸಲ್ ಮಾತ್ರ ಬಂದಿರಲಿಲ್ಲ. ಈ ಕುರಿತು ಸರ್ವಿಸ್ ಸೆಂಟರ್ ರವರನ್ನ ವಿಚಾರಿಸಿದಾಗ, ಏನೋ ಸಮಸ್ಯೆಯಾಗಿದೆ, ನಾಳೆ ಖಂಡಿತ ನಿಮ್ಮ ಪಾರ್ಸಲ್ ನಿಮ್ಮ ಕೈ ಸೇರಲಿದೆ ಎಂದು ಹೇಳಿ ಕಳಿಸುತ್ತಾರೆ.
ದಿಪಾವಳಿ ನಿಮಿತ್ತ ಗ್ರಾಹಕನಿಗೆ ಆ್ಯಪಲ್ ಮೊಬೈಲ್ ಡೆಲಿವರಿ ಕೊಡಬೆಕಾಗಿದ್ದ, ಬ್ರ್ಯಾಂಚ್ ಮ್ಯಾನೇಜರ್ ,ಈ ರೀತಿ ಸಮಸ್ಯೆ ಆಗಿದೆ ಎಂದು ಗ್ರಾಹಕನಿಗೆ ಮನವರಿಕೆ ಮಾಡಿ, ಮೊಬೈಲ್ ಡೆಲಿವರಿ ಎರೆಡು ದಿನ ಮುಂದೆ ಹಾಕುತ್ತಾನೆ. ನಂತರ ನವ್ಹಂಬರ್ 3 ರಂದು ಮತ್ತೇ ಸರ್ವಿಸ್ ಸಿಬ್ಬಂದಿಯನ್ನ ಮೊಬೈಲ್ ಅಂಗಡಿ ವ್ಯವಸ್ಥಾಪಕ ಸಂಪರ್ಕಿಸಲು ಅದೆಷ್ಟೇ ಪ್ರಯತ್ನಿಸದರೂ ಅತನ ಕೈಗೆ ಸಿಬ್ಬಂದಿ ಸಿಗುವದಿಲ್ಲ. ಮರುದಿನ, ದಿನಾಂಕ 4 ರಂದು, ಸರ್ವಿಸ್ ಸಿಬ್ಬಂದಿಯನ್ನ ಮತ್ತೇ ವಿಚಾರಿಸಿದಾಗ ಬಂದ ಉತ್ತರ “ಮೊಬೈಲ್ ಮಿಸ್ಸಿಂಗ್” ಸರ್ ಎಂದು! ದಾರಿ ಮಧ್ಯೆ ಲಕ್ಷ್ಮೇಶ್ವರದಲ್ಲಿ ಕಾರ್ಗೋ ಸರ್ವಿಸ್ ಸಿಬ್ಬಂದಿ ಪಾರ್ಸಲ್ ಇಳಿಸಿಕೊಳ್ಳುವಾಗ, ಮಿಸ್ ಆಗಿ ಮೊಬೈಲ್ ಪಾರ್ಸಲ್ ನ್ನು ಇಳಿಸಿಕೊಂಡುಬಿಟ್ಟಿದ್ದರಂತೆ ಸರ್, ಆದರೆ ಮತ್ತೇ ಅದನ್ನ ಬಸ್ ನಿರ್ವಾಹಕನ ಕೈಗೆ ಕೊಟ್ಟು, ಲಕ್ಷ್ಮೇಶ್ವರದ ಪಾರ್ಸಲ್ ನ್ನು ಮಾತ್ರ ಅವರು ಇಳಿಸಿಕೊಂಡಿದ್ದಾರಂತೆ, ಅದೇನೆ ಇರಲಿ, ನಾನು ನಿಮ್ಮ ಪಾರ್ಸಲ್ ಹುಡುಕಿಕೊಡುತ್ತೇವೆ ಸರ್ ಎಂದು ಮೊಬೈಲ್ ಅಂಗಡಿ ವ್ಯವಸ್ಥಾಪಕನಿಗೆ ಸರ್ವಿಸ್ ಸಿಬ್ಬಂದಿ ಸಮಾಧಾನ ಮಾಡಿ ಹೇಳಿ ಕಳಿಸಿದ್ದಾರೆ.
ಆದರೆ ಇಂದಿಗೆ 40 ದಿನಗಳಾದರೂ ಮ್ಯಾನೇಜರ್ ಕೈಗೆ ಆತನ ಪಾರ್ಸಲ್ ಸೇರಿಲ್ಲ. ಇದರಿಂದ ತಾನು ಡೀಲರ್ ಶಿಪ್ ಪಡೆದ ಕಂಪನಿಯಿಂದಲೂ ತೊಂದರೆ ಅನುಭವಿಸಿದ ಮೊಬೈಲ್ ಅಂಗಡಿ ಬ್ರ್ಯಾಂಚ್ ಮ್ಯಾನೇಜರ್, ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೆ KSRTC ಹಾಗೂ ಕಾರ್ಗೋ ಸರ್ವಿಸ್ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಆದರೆ ಇಲ್ಲಿ ಇಂಟ್ರೆಸ್ಟಿಂಗ್ ಸಂಗತಿ ಅಂದರೆ, ಕಾರ್ಗೋ ಸರ್ವಿಸ್ ತೆಗೆದುಕೊಂಡಿದ್ದ ಗದಗನ ಟೆಂಟರ್ ದಾರರು ತಮ್ಮ ಟೆಂಡರ್ ಅವಧಿ ದಿ.23 ರಂದು ಮುಕ್ತಾಯಗೊಳ್ಳುವ ಹಿನ್ನೆಲೆ, ಕಳೆದು ಹೋದ ಮೊಬೈಲ್ ಪಾರ್ಸಲ್ ಮ್ಯಾನೆಜರ್ ಗೆ ತಲುಪದೇ ಇದ್ದರೂ ಕೂಡ, ತಮ್ಮ ಸರ್ವಿಸ್ ಸೆಂಟರ್ ದಾಖಲಾತಿಯಲ್ಲಿ ಮೊಬೈಲ್ ಪಾರ್ಸಲ್ *“ರಿಸಿವ್ಡ್ & ಡೆಲಿವರಿ”* ಎಂದು ಬರೆದುಕೊಂಡಿರುವದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವದಲ್ಲದೇ, ಬೇರೆ ತಿರುವು ಪಡೆದುಕೊಂಡಿದೆ.
ಇತ್ತ, ಪಾರ್ಸಲ್ ಇರಿಸಿಕೊಂಡು ಬಂದಿದ್ದ ಬಸ್ ನಿರ್ವಾಹಕನನ್ನೂ ಸಹ KSRTC ಮೇಲಾಧಿಕಾರಿಗಳು ವಿಚಾರಿಸಿದ್ದಾರೆ.ಆದರೆ ಮೊಬೈಲ್ ಪಾರ್ಸಲ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇತ್ತ ಕಾರ್ಗೋ ಸಂಸ್ಥೆಯ ಮೇಲಾಧಿಕಾರಿಗಳಿಗೂ ಮತ್ತು ನಿಗಮ ಮಂಡಳಿಯವರಿಗೂ ಮೊಬೈಲ್ ಅಂಗಡಿ ವ್ಯವಸ್ಥಾಪಕ ಸಾಕಷ್ಟು ಬಾರಿ ದೂರು ನಿಡಿದ್ದಾರೆ. ಆದರೆ ಈವರೆಗೂ ಅವರಿಂದ ಯಾವುದೇ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಅನ್ನೋದು ವ್ಯವಸ್ಥಾಪಕನ ಆರೋಪವಾಗಿದೆ.
ಹೀಗಾಗಿ ಇದರಿಂದ ಆಕ್ರೋಶಗೊಂಡಿರೋ ಮೊಬೈಲ್ ಅಂಗಡಿ ವ್ಯವಸ್ಥಾಪಕ, KSRTC ಹಾಗೂ ಕಾರ್ಗೋ ಸಂಸ್ಥೆಯ ಸಿಬ್ಬಂದಿ ಸೇರಿ ಒಟ್ಟು, ಐದು (05) ಜನರ ಮೆಲೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಪಾರ್ಸಲ್ ನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ್ದಾನೆ. ಸದ್ಯ ಬಡಾವಣೆ ಪೊಲೀಸರು, ಇದ್ದ ಮೂವರಲ್ಲಿ ಕದ್ದೋರ್ಯಾರು? ಅನ್ನೋದನ್ನ ಪತ್ತೆ ಹಚ್ಚುವ ಮೂಲಕ, *“ಒಂದು ಆ್ಯಪಲ್ ಫೋನ್”* ಪ್ರಕರಣವನ್ನ ಬಯಲಿಗೆಳೆಯಬೇಕಾಗಿದೆ.