ಗದಗ :ಗದಗ ಜಿಲ್ಲೆ ಗದಗ ತಾಲೂಕಿನ ಕಳಸಾಪುರ ಗ್ರಾಮದ ಬಂಜಾರ ಕಲಾವಿದ ಶ್ರೀ ಸುರೇಶ ಲಮಾಣಿ ಇವರಿಗೆ “ಸುವರ್ಣ ಪ್ರಶಸ್ತಿ”ದೊರೆತ ಹಿನ್ನೆಲೆ ಕಳಸಾಪುರ ಗ್ರಾಮ, ತಾಂಡಾ ಹಾಗೂ ಆದಿತ್ಯ ನಗರದ ಗುರುಹಿರಿಯರು ಕೂಡಿಕೊಂಡು ಅದ್ಧೂರಿಯಾಗಿ ಅವರನ್ನ ಸನ್ಮಾನಿಸಿ ಗೌರವಿಸಿದರು.
ಶನಿವಾರ ಕಳಸಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಶಾಲೆಯ ಶಿಕ್ಷಕರು, ಶಾಲಾ ಮಕ್ಕಳು ಹಾಗೂ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ, ಕರ್ನಾಟಕದ ಸುವರ್ಣ ಪ್ರಶಸ್ತಿ ಪಡೆದು ಗ್ರಾಮಕ್ಕೆ ಕೀರ್ತಿ ತಂದ ಶ್ರೀ ಸುರೇಶ ಲಮಾಣಿ ಇವರನ್ನು ಅದ್ದೂರಿ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಸ್ವಾಗತಿಸುವ ಮೂಲಕ ಬಂಜಾರ, ವೀರಶೈವ, ವಾಲ್ಮೀಕಿ, ಡೋಹರ ಕಕ್ಕಯ್ಯ ಹಾಗೂ ಹಲವು ಸಮುದಾಯಗಳಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಶರದರಾವ್ ಹುಯಿಲಗೋಳ, ಮುಖ್ಯ ಅತಿಥಿಗಳಾಗಿ ಪರಮೇಶ ನಾಯಕ, ಅನುಸೂಯ ಬೆಟಿಗೇರಿ, ಗ್ರಾಮ ಪಂಚಾಯತಿ ಅಧ್ಯಕ್ಷರು ಕಳಸಾಪುರ, ಸಿ.ಬಿ.ಪಲ್ಲದ್, ಸಹದೇವ ಘೋಡಕೆ ಹಾಗೂ ಅಥಿತಿಗಳಾಗಿ ರಾಮಪ್ಪ ಅಣ್ಣಿಗೇರಿ, ಮಾಸಾಬಿ ಪೆಂಡಾರಿ, ರತ್ನಾ ನಾಯ್ಕರ, ರಾಜಕುಮಾರ ಕಟ್ಟಿಮನಿ, ಚಂದ್ರು ಲಮಾಣಿ, ಕೃಷ್ಣಪ್ಪ ಲಮಾಣಿ, ಕುಮಾರ್ ಕಟ್ಟಿಮನಿ, ಲಕ್ಷ್ಮವ್ವ ಚವ್ಹಾಣ, ಮಂಜುಳಾ ನರಸಾಪುರ್, ರಾಮಕೃಷ್ಣ ಬೇವಿನಕಟ್ಟಿ, ಮಾಬುಲಿ ಪೆಂಡಾರಿ, ವಿಜಯ ಕಾರಬಾರಿ, ಶಿವಪುತ್ರಪ್ಪ ನಾಯ್ಕ, ಕುಮಾರ್ ಕಾರಬಾರಿ, ಕೃಷ್ಣಪ್ಪ ಲಮಾಣಿ, ಪರಶುರಾಮ್ ಚೌವ್ಹಾಣ, ಗಣೇಶ್ ಕಟ್ಟಿಮನಿ ಸೇರಿದಂತೆ ಗ್ರಾಮದ ಗುರುಹಿರಿಯರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ಶಿಕ್ಷಕ ಎಚ್.ವೈ ತಳವಾರ ನೆರವೆರಿಸಿದರು.