ಮುಂಡರಗಿ: ಗದಗ ಜಿಲ್ಲೆ ಮುಂಡರಗಿ ಸಾರಿಗೆ ಘಟಕದಿಂದ ಎರೆಡು ಹೊಸ ಬಸ್ ಗಳಿಗೆ ಇಂದು ಚಾಲನೆ ನೀಡಲಾಯಿತು.
ಶಿರಹಟ್ಟಿ ಕ್ಷೇತ್ರದ ಶಾಸಕರಾದ ಡಾ.ಚಂದ್ರು ಲಮಾಣಿ ಅವರ ಪ್ರಯತ್ನದ ಫಲವಾಗಿ, ಸಾರ್ವಜನಿಕರಿಗೆ ಅನಕೂಲವಾಗಲಿ ಅನ್ನುವ ಉದ್ದೇಶದಿಂದ, ಮುಂಡರಗಿಯಿಂದ ಧರ್ಮಸ್ಥಳ ಹಾಗೂ ಮುಂಡರಗಿಯಿಂದ ಗದಗ ನಗರಕ್ಕೆ ಸಂಚರಿಸಲು ಎರೆಡು ನೂತನ ಬಸ್ಸುಗಳಿಗೆ ಇಂದು ಮುಂಡರಗಿ ಡಿಪೋದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಮಾಜಿ ಜಿ.ಪಂ.ಸದಸ್ಯ ಹಾಗೂ ಬಿಜೆಪಿ ಮುಖಂಡರಾದ ಹೇಮಗಿರೀಶ ಹಾವಿನಾಳ, ಪ್ರಶಾಂತ್ ಗುಡದಪ್ಪನವರ ಮತ್ತು ಮುಂಡರಗಿ ಡಿಪೋ ವ್ಯವಸ್ಥಾಪಕರಾದ ಶೇಖರ ನಾಯಕ ಸೇರಿದಂತೆ ಸಾರಿಗೆ ಘಟಕದ ಸಿಬ್ಬಂದಿ ಹಾಗೂ ಹಲವು ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ನೂತನ ಬಸ್ಸುಗಳಲ್ಲಿ ಒಂದು ಬಸ್ ಮುಂಡರಗಿಯಿಂದ ಬೆಳಿಗ್ಗೆ 8-15 ಕ್ಕೆ ಬೆಳ್ಳಟ್ಟಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೊರಡಲಿದ್ದು, ಮತ್ತೊಂದು ಬಸ್ ಗದಗ ಹಾಗೂ ಮುಂಡರಗಿ ಮಾರ್ಗದಲ್ಲಿ ಸಂಚರಿಸುತ್ತದೆ. ಈಗಾಗಲೇ ಈ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಬಹಳಷ್ಟು ವರ್ಷಗಳಿಂದ ಸಂಚರಿಸಿ ಹಳೆಯದಾದ ಹಿನ್ನೆಲೆ ಇದೀಗ ಹೊಸ ಬಸ್ಸುಗಳನ್ನ ಬಿಡಲಾಗಿದೆ. ಪ್ರಯಾಣಿಕರ ಇದರ ಸದುಪಯೋಗ ಪಡೆಯಬೇಕೆಂದು ಡಿಪೋ ವ್ಯವಸ್ಥಾಪಕ ಶೇಖರ ನಾಯ್ಕ ತಿಳಿಸಿದರು.