ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಾದಿತೇ! ಅನ್ನೋ ಗಾದೆ ಮಾತನ್ನ ನೀವೆಲ್ಲಾ ಕೇಳಿಯೇ ಇರ್ತಿರಾ. ಹೌದು, ಆ ಗಾದೆ ಮಾತು ಕೂಡಾ ಇದೀಗ ನಿಜವಾಗಿದೆ.ಪಶ್ಚಿಮ ಸಿಕ್ಕಿಂನಲ್ಲಿ, ವ್ಯಕ್ತಿಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿಯೂ ಚೊಚ್ಚಲ ಮಗುವಿನ ತಂದೆಯಾಗಿದ್ದಾರೆ. ಅವರ 40 ವರ್ಷದ ಪತ್ನಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವರದಿಗಳ ಪ್ರಕಾರ, ಆ ವ್ಯಕ್ತಿ 20 ವರ್ಷಗಳ ಹಿಂದೆ ತಮ್ಮ 50ನೇ ವಯಸ್ಸಿನಲ್ಲಿ 20 ವರ್ಷದ ಹುಡುಗಿಯನ್ನು ಮದುವೆಯಾಗಿದ್ದು, ಆ ನಂತರ ಹಲವಾರು ಬಾರಿ ವೈದ್ಯರನ್ನು ಭೇಟಿಯಾದರೂ ಅವರು ಪೋಷಕರಾಗಲು ಸಾಧ್ಯವಾಗಿರಲಿಲ್ಲವಂತೆ. ಆದರೆ ಇದೀಗ ಹೆಣ್ಣು ಮಗುವಿಗೆ ಕಾರಣರಾಗಿದ್ದಾರೆ. ಅಲ್ಲದೇ ಜನಿಸಿರುವ ಮಗು ಆರೋಗ್ಯವಾಗಿದೆ ಎಂದು ವರದಿಗಳು ಸಹ ಹೇಳಿವೆ.
70 ನೇ ವಯಸ್ಸಿನಲ್ಲೂ ಚೊಚ್ಚಲ ಮಗುವಿಗೆ ತಂದೆಯಾದ ವೃದ್ಧ!
16
previous post