ಒಂದಲ್ಲ ಒಂದು ಪ್ರಯೋಗ ಮಾಡುತ್ತಾ, ತನ್ನದೇ ಆದ ಪತಂಜಲಿ ಬ್ರ್ಯಾಂಡ್ ಸ್ಥಾಪಿಸಿ, ಆಯುರ್ವೇದ ಪ್ರೊಡಕ್ಟಗಳನ್ನ ಮಾರುಕಟ್ಟೆಗೆ ತಂದವರು ಬಾಬಾ ರಾಮದೇವ್ ಗುರೂಜಿ. ಇದೀಗ ಕತ್ತೇ ಹಾಲಿನಲ್ಲೂ ಸುದ್ದಿಯಾಗಿದ್ದಾರೆ ರಾಮದೇವ್ ಬಾಬಾ. ಹೌದು, ಬಾಬಾ ರಾಮದೇವ್ ಕತ್ತೆ ಹಾಲು ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋಲ್ಲಿ ಬಾಬಾ ರಾಮ್‌ದೇವ್ ಕತ್ತೆಯ ಹಾಲನ್ನು ಕರೆಯುತ್ತಿರುವುದು ಕಾಣಬಹುದಾಗಿದ್ದು, “ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ಕತ್ತೆಯ ಹಾಲನ್ನು ತೆಗೆಯುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.ಇದಷ್ಟೇ ಅಲ್ಲದೇ, ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು ಎನ್ನುವ ಮಾಹಿತಿಯನ್ನ ಹಾಲು ಕುಡಿದ ನಂತರ ಅವರು ಹೇಳಿದ್ದಾರಂತೆ.
ಕತ್ತೆ ಹಾಲು ಕುಡಿದ ಬಾಬಾ ರಾಮದೇವ್!
6