ನಿಮಗೆಲ್ಲಾ ತಿಳಿದಿರುವಂತೆ ತೆಲುಗು ಹಾಗೂ ಇನ್ನಿತರ ಭಾಷೆಗಳಲ್ಲಿ ಪುಷ್ಪ ಸಿನಿಮಾ ಸಾಕಷ್ಟು ಹಲ್ ಚಲ್ ಎಬ್ಬಿಸಿರೋ ಚಿತ್ರ. ಈಗಾಗಲೇ ಪುಷ್ಪ ಭಾಗ-1 ಬಾಕ್ಸ್ ಆಫೀಸ್ ನ್ನ ಕೊಳ್ಳೆ ಹೊಡೆದಿದೆ. ಇದೀಗ ನಾಳೆ (ಡಿಸೆಂಬರ್ 5) ಪುಷ್ಪ ಸಿನಿಮಾ ಭಾಗ-2 ಬಿಡುಗಡೆಗೊಳ್ಳಲಿದೆ. ಆದರೆ ಈ ನಡುವೆ ಪುಷ್ಪ ಸಿನಿಮಾ ಕುರಿತು ಬಿಜೆಪಿ ಶಾಸಕರೊಬ್ಬರು ಹೇಳಿಕೆ ನಿಡಿದ್ದಾರೆ.
ಹೌದು, ಪುಷ್ಪ ಸಿನಿಮಾದಲ್ಲಿ ತೋರಿಸಿರುವುದೆಲ್ಲ ಸುಳ್ಳಾಗಿದ್ದು, ಒಂದು ಲಕ್ಷ ಮೌಲ್ಯದ ಕೆಂಪು ಚಂದನವನ್ನು ಒಂದು ಕೋಟಿ ಎಂಬಂತೆ ತೋರಿಸಲಾಗಿದೆ. ಆದರೆ ಇದರ ಪರಿಣಾಮ ಯುವಕರು ಹಲವು ಮರಗಳನ್ನು ಕತ್ತರಿಸಿ ಭ್ರಷ್ಟರಾಗುತ್ತಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಕೇಶ್ ರೆಡ್ಡಿ ಹೇಳಿದ್ದಾರೆ. ‘ಪುಷ್ಪ 2’ ಸಿನಿಮಾ ಬಿಡುಗಡೆ ಬಳಿಕ ಎಷ್ಟು ಮರಗಳನ್ನು ಕತ್ತರಿಸುತ್ತಾರೋ?,” ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ. ಈ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಅವರನ್ನು ಜೈಲಿಗಟ್ಟಬೇಕು ಎಂದು ರೆಡ್ಡಿ ಒತ್ತಾಯಿಸಿದ್ದಾರೆ.