ಮುಂಡರಗಿ: ನಾಳೆ (5-12-24) ರಂದು ಮುಂಡರಗಿ ಪಟ್ಟಣ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ (ವಿದ್ಯುತ್ ಇರುವದಿಲ್ಲ) ನಿಲುಗಡೆ ಆಗಲಿದೆ. ಮುಂಜಾನೆ 10 ಗಂಟೆಯಿಂದ ಸಂಜೆ 5-30 ರವೆರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜನೀಯರರು(ವಿ) ಹೆಸ್ಕಾಂ, ಮುಂಡರಗಿ ಇವರು ತಿಳಿಸಿದ್ದಾರೆ.
ಕಾರಣ 110ಕೆ,ಮುಂಡರಗಿ, ಡಂಬಳ ಮತ್ತು ಶಿಂಗಟಾಲೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವದರಿಂದ ವಿದ್ಯುತ್ ನಿಲುಗಡೆಯಾಗಲಿದೆ.
ಸದರಿ ಉಪಕೇಂದ್ರಗಳಿಂದ ಪೂರೈಕೆಯಾಗುವ 140 ಕೆ.ವಿ. ವಿಜಯನಗರ ಶುಗರ್ಸ್,ಬೀಡನಾಳ ನೀರಾವರಿ, 33ಕೆ2, ನೀರು ಸರಬರಾಜು ಶಿಂಗಟಾಲೂರು, ಕೆ.ಎಸ್.ಎಸ್.ಎಲ್, 110ಕೆ.ವಿ ಎನರ್ಕಾಣ್ ವಿಂಡ್, 110.ಕೆವಿ, ಸುಜಲಾನ್ ವಿಂಡ್, 110.ಕೆವಿ,ಚುರ್ಚಿಹಾಳ ಸೋಲಾರ್, ಮತ್ತು ಎಲ್ಲಾ ನಗರ, ಕೈಗಾರಿಕಾ ನೀರಾವರಿ ಪಂಪಸೆಟ್ ಗಳ ಮಾರ್ಗ, ಕುಡಿಯುವ ನೀರು ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲಾ 11 ಕೆವಿ ವಿತರಣಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಕಾರಣ, ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಮುಂಡರಗಿ ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.