6
ರೋಣ: ಗದಗ ಜಿಲ್ಲೆ ರೋಣ ತಾಲೂಕಿನ ಸುಕ್ಷೇತ್ರ ಬೆನಹಾಳ ಗ್ರಾಮದಲ್ಲಿ ಪವಾಡ ಪುರುಷ ಲಿಂಗೈಕ್ಯ (ಕರ್ಮಯೋಗಿ) ಶ್ರೀ ವೀರಯ್ಯಜ್ಜನವರ 58ನೇ ಪುಣ್ಯಾರಾಧನೆ ನೆರವೇರಿತು.
ಹರಗುರು ಚರಮೂರ್ತಿಗಳು ಹಾಗೂ ಗ್ರಾಮದ ಗುರುಹಿರಿಯರು ಮತ್ತು ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ ಗದ್ದುಗೆಗೆ ರುದ್ರಾಭಿಷೇಕ ಮತ್ತು, ಮಹಾ ಮಂಗಳಾರತಿ ಹಾಗೂ ಮಹಾಪ್ರಸಾದೊಂದಿಗೆ ಪುಣ್ಯಾರಾಧನೆ ಜರುಗಿತು.
ಅಲ್ಲದೇ ಪುಣ್ಯಾರಾಧನೆ ನಿಮಿತ್ತ ರಾತ್ರಿ ಭಜನೆಯೊಂದಿಗೆ ಜಾಗರಣೆ ಮಾಡಲಾಯಿತು.ಗ್ರಾಮದಲ್ಲಿ ಮಳೆ ಬೆಳೆ ಸಮೃದ್ಧಿಯಾಗಲಿ,ರೈತರಿಗೆ ಕಲ್ಯಾಣವಾಗಲಿ ಎಂದು ಸರ್ವಸದ್ಭಕ್ತರು ಪವಾಡ ಪುರುಷನ ಸನ್ನಿಧಿಯಲ್ಲಿ ಬೇಡಿಕೊಂಡರು.