7
ಗದಗ: ಬೆಂಗಳೂರಿನ ನವಭಾರತ ಉದಯ ಪ್ರತಿಷ್ಠಾನ ಇವರಿಂದ ಗದುಗಿನ ಎಂ.ಜಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಮಕ್ತುಮಸಾಬ ನಾಯಕ ಅವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು 28 ಲಕ್ಷ ವಿದ್ಯಾರ್ಥಿವೇತನ ನೀಡಿದ ಹಾಗೂ ಸಾಕಷ್ಟು ಶಾಲೆಗಳಿಗೆ ಲೇಖನ ಸಾಮಗ್ರಿಗಳ, ಬ್ಯಾಗಗಳ ವಿತರಣೆ ಮಾಡಿದ ಮತ್ತು ಕೋವಿಡ್-19 ಸಂದರ್ಭದಲ್ಲಿ 22 ದಿನಗಳ ಅನ್ನದಾಸೋಹ ಕಾರ್ಯಕ್ರಮ ನೆರವೇರಿಸಿದ ಇವರ ಸಮಾಜ ಸೇವೆಗೆ ಈ ಪ್ರಶಸ್ತಿ ಸಂದಿದೆ. ಬೆಂಗಳೂರಿನ ವಿಜಯನಗರದ ಶಾಸಕರಾದ ಮಾನ್ಯ ಶ್ರೀ ಎಮ್ ಕೃಷ್ಣಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.