ಚಾಮರಾಜನಗರ: ಸರ್ಕಾರಗಳು ಅದೆಷ್ಟೇ ಭದ್ರತೆ ವ್ಯವಸ್ಥೆ ಕಲ್ಪಿಸಿದರೂ ಪ್ರಾಣಿಬೇಟೆ ಮಾತ್ರ ನಿಲ್ಲುತ್ತಿಲ್ಲ. ಅದರಲ್ಲೂ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಂತೂ ಇದಕ್ಕೆ ಕಡಿವಾಣ ಹಾಕೋದು ಸವಾಲಾಗಿದೆ. ಹೀಗಾಗಿ ರಾಜ್ಯದ ಐದು ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಅರಣ್ಯ ಸಂಪತ್ತು ರಕ್ಷಣೆ, ಕಳ್ಳಬೇಟೆ ತಡೆಗೆ ದೇಶದ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರವನ್ನು ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾರಂಭಿಸಲಾಗಿದೆ. ಇಲ್ಲಿ 10 ಬೆಳ್ಳಿಯಂ ಮಾಲಿನಾಯ್ಸ್ (ಹೆಣ್ಣು) ತಳಿಯ ಶ್ವಾನಗಳಿಗೆ 8-10 ತಿಂಗಳು ತರಬೇತಿ ನೀಡಿ 5 ಹುಲಿ ಸಂರಕ್ಷಿತ ಕೇಂದ್ರಗಳಿಗೆ ತಲಾ 2 ಶ್ವಾನಗಳನ್ನು ಕಳುಹಿಸಲಾಗುತ್ತದೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಎನ್.ಪ್ರಭಾಕರನ್ ಹೇಳಿದ್ದಾರೆ.
ಕಳ್ಳಬೇಟೆ ತಡೆಗೆ ಬಂಡೀಪುರದಲ್ಲಿ ದೇಶದ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರ ಆರಂಭ
25
previous post