ವಾಶಿಂಗ್ಟನ್: ಎಂಎಚ್ -60 ಆರ್ ಮಲ್ಟಿ-ಮಿಷನ್ ಹೆಲಿಕಾಪ್ಟರ್ ಉಪಕರಣಗಳು ಮತ್ತು ಅದಕ್ಕೆ ಸಂಬಂಧಿತವುಗಳನ್ನು 1.17 ಬಿಲಿಯನ್ ಡಾಲರ್ ಅಂದಾಜು ವೆಚ್ಚದಲ್ಲಿ ಮಾರಾಟ ಮಾಡಲು ಅನುಮೋದನೆ ನೀಡಿರುವ ನಿರ್ಧಾರವನ್ನು ಬೈಡನ್ ಆಡಳಿತ ಸೋಮವಾರ US ಕಾಂಗ್ರೆಸ್ಗೆ ತಿಳಿಸಿದೆ.
ಈ ಉಪಕರಣಗಳಿಂದ ಭಾರತಕ್ಕೆ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಆಗಬುದಾದ ಜಲಾಂತರ್ಗಾಮಿ ಯದ್ದಗಳನ್ನು ಎದುರಿಸಲು ದೇಶದ ಸುರಕ್ಷತೆಯನ್ನು ವೃದ್ದಿಸಲು ಅನುಕೂಲವಾಗುತ್ತದೆ ಎಂದು ಸಂಸ್ಥೆ ಕಾಂಗ್ರೆಸ್ಗೆ ನೀಡಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಬೈಡನ್ ಆಡಳಿತವು ತನ್ನ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ವಾರಗಳ ಮೊದಲು ಭಾರತಕ್ಕೆ ಪ್ರಮುಖ ರಕ್ಷಣಾ ಉಪಕರಣಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ.
ಡೊನಾಲ್ಡ್ ಟ್ರಂಪ್ 2025 ರ ಜನವರಿ 20 ರಂದು ಅಮೆರಿಕದ 47 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅಧಿಸೂಚನೆಯ ಪ್ರಕಾರ, ಭಾರತವು 30 ಮಲ್ಟಿಫಂಕ್ಷನಲ್ ಇನ್ಫರ್ಮೇಷನ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಮತ್ತು ಜಾಯಿಂಟ್ ಟ್ಯಾಕ್ಟಿಕಲ್ ರೇಡಿಯೋ ಸಿಸ್ಟಮ್ಸ್ (ಎಂಐಡಿಎಸ್-ಜೆಟಿಆರ್ಎಸ್) ಖರೀದಿಸಲು ವಿನಂತಿಸಿದೆ.