ಮುಂಡರಗಿ:ಸ್ಥಳಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ತಿಂಗಳ ಪರ್ಯಂತರವಾಗಿ ನಡೆದು ಬಂದ ಕಾರ್ತಿಕ ಮಾಸದ ನಿಮಿತ್ತ ನೆರವೇರುವ ದೀಪೋತ್ಸವ ಸೇವೆಯ ಮಹಾಮಂಗಲೋತ್ಸವ ಸಮಾರಂಭವು ಇಂದು ಶ್ರದ್ಧಾ ಭಕ್ತಿಯಿಂದ ವೈಭವಪೂರಿತವಾಗಿ ನೆರವೇರಿತು.
ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಮಂಗಲೋತ್ಸವ ಸಮಾರಂಭಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಮಂಗಲೋತ್ಸವದ ಹಿನ್ನೆಲೆ, ಬೆಳಿಗ್ಗೆ ಕತೃ ಗದ್ದುಗೆಗೆ ರುದ್ರಾಭಿಷೇಕ, ಮಂಗಳಾರುತಿ, ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತಿಂಗಳ ಪರ್ಯಂತರವಾಗಿ ಪ್ರತಿದಿನವೂ ಶ್ರೀಗಳ ಸಾನಿಧ್ಯದಲ್ಲಿ ಭಕ್ತಾಧಿಗಳು ಕಾರ್ತಿಕೋತ್ಸವದ ತಮ್ಮ ಸೇವೆಯನ್ನ ಸಲ್ಲಿಸಿದ್ದು, ಇಂದು ಕೊನೆ ದಿನವಾದ ಹಿನ್ನೆಲೆ ಸಹಸ್ರಾರು ಸದ್ಭಕ್ತಾಧಿಗಳು ಶ್ರೀಮಠದ ಗದ್ದುಗೆ ಆವರಣದಲ್ಲಿ ಕುಟುಂಬ ಸಮೇತ ಆಗಮಿಸಿ ದೀಪಗಳನ್ನ ಬೆಳಗಿಸುವ ಮೂಲಕ ಪೂಜ್ಯ ಶ್ರಿಗಳ ದರ್ಶನಾಶಿರ್ವಾದ ಪಡೆದು ಅನ್ನದಾನೀಶನ ಕೃಪೆಗೆ ಪಾತ್ರರಾದರು.
ಈ ವೇಳೆ ಶ್ರೀಮಠದ ಪ್ರವಚನ ಕಮೀಟಿ, ಜಾತ್ರಾ ಕಮೀಟಿ ಹಾಗೂ ಅಕ್ಕನ ಬಳಗದ ಸದಸ್ಯೆಯರು, ಹಾಗೂ ಶ್ರೀಮಠದ ವಿದ್ಯಾರ್ಥಿಗಳ ಬಳಗ ಸೇರಿದಂತೆ ಸಹಸ್ರಾರು ಸದ್ಭಕ್ತರು ಪಾಲ್ಗೊಂಡಿದ್ದರು.