17
ಕಲಬುರಗಿ: ವರದಕ್ಷಿಣೆ ಕಿರುಕುಳ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 93 ವರ್ಷದ ನಾಗಮ್ಮ ಕಳೆದ 11 ತಿಂಗಳಿಂದ ಕಲಬುರಗಿ ಕಾರಾಗೃಹದಲ್ಲಿದ್ದು, ಪೆರೋಲ್ ಸಿಕ್ಕ ಹಿನ್ನೆಲೆ ವೃದ್ಧೆಯನ್ನು ಬಿಡುಗಡೆ ಮಾಡಲಾಗಿದೆ. ವಯೋಸಹಜ ಕಾರಣದಿಂದ ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದ ಈಕೆಯ ಆರೈಕೆಯನ್ನು ಜೈಲಿನ ಸಿಬ್ಬಂದಿ ಮಾಡಿದ್ದರು. ಉಪ ಲೋಕಾಯುಕ್ತ ನ್ಯಾ.ವೀರಪ್ಪ ಇತ್ತೀಚೆಗೆ ಜೈಲಿಗೆ ಭೇಟಿ ಕೊಟ್ಟ ವೇಳೆ ಅಜ್ಜಿಯ ಸ್ಥಿತಿ ಕಂಡು ಸುಪ್ರೀಂಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸೂಚಿಸಿದ್ದರು.ಇದೀಗ ಅಜ್ಜಿಯನ್ನ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.