ಭಾರತದಲ್ಲಿ ಪರಿಸರ ಸ್ನೇಹಿ ಸುಸ್ಥಿರ ಸಾರಿಗೆಯನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ ಭಾರತೀಯ ರೈಲ್ವೆ ತನ್ನ ಮೊದಲ ಹೈಡ್ರೋಜನ್ ಫ್ಯೂಲ್ ಸೆಲ್ ರೈಲನ್ನು ಈ ವರ್ಷದ ಡಿಸೆಂಬರ್ನಲ್ಲಿ ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ಪ್ರಾರಂಭಿಸಲು ಸಜ್ಜಾಗಿದೆ. ಹರಿಯಾಣದ 90 ಕಿಲೋಮೀಟರ್ ಉದ್ದದ ಜಿಂದ್-ಸೋನಿಪತ್ ಮಾರ್ಗದಲ್ಲಿ ಭಾರತದ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್ ಚಾಲಿತ ರೈಲು ಚಲಿಸಲಿದೆ.
ಮೇಲೆ ತಿಲಿಸಿದಂತೆ ರೈಲು ಹೈಡ್ರೋಜನ್ ಫ್ಯೂಲ್ ಸೆಲ್ ನಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಈ ರೈಲು ಚಲಿಸಲು ಬೇಕಾಗುವ ವಿದ್ಯುತನ್ನು ಈ ಫ್ಯೂಲ್ ಸೆಲ್ನಿಂದ ಉತ್ಪಾದಿಸಿಕೊಳ್ಳುತ್ತದೆ. ಹೈಡ್ರೋಜನ್ ಆಧಾರಿತ ಇಂಧನವು ಉಪಉತ್ಪನ್ನವಾಗಿ ನೀರಿನ ಆವಿಯನ್ನು ಮಾತ್ರ ಹೊರಸೂಸುತ್ತದೆ. ಇದು ಸಂಪೂರ್ಣವಾಗಿ 100 ಪ್ರತಿಶತ ಪರಿಸರ ಸ್ನೇಹಿಯಾಗಿರಲಿದೆ. ಈ ಹೊಸ ತಮತ್ರಜ್ಞಾನದಿಂದ ಭಾರತೀಯ ರೈಲ್ವೆ 2030 ರ ವೇಳೆಗೆ ಸಂಪೂರ್ಣ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಹೊಂದಲಿದೆ.
ಪರಿಸರ ಸ್ನೇಹಿಯಾಗಿರುವುದಲ್ಲದೆ, ಹೈಡ್ರೋಜನ್ ಚಾಲಿತ ರೈಲು ಹೆಚ್ಚು ಶಕ್ತಿ-ದಕ್ಷತೆ ಮತ್ತು ಹೋಲಿಕೆಯಲ್ಲಿ ಸಾಂಪ್ರದಾಯಿಕ ಡೀಸೆಲ್ ಅಥವಾ ಕಲ್ಲಿದ್ದಲು ಚಾಲಿತ ರೈಲುಗಳಿಗಿಂತ ಕಡಿಮೆ ಶಬ್ದ ಮಾಲಿನ್ಯದ ಜೊತೆಗೆ ಹಸಿರು ಭವಿಷ್ಯಕ್ಕಾಗಿ ಉತ್ತಮ ಆಯ್ಕೆಯಾಗಿದೆ.
ಸುಮಾರು 80 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲುಗಳು ಭವಿಷ್ಯದ ಇಂಧನ ಎಂದು ಕರೆಯಲ್ಪಡುವ ಹೈಡ್ರೋಜನ್ ಇಂಧನದಲ್ಲಿ ಚಲಿಸುವುದರಿಂದ ದೀರ್ಘಾವಧಿಯಲ್ಲಿ ಕಡಿಮೇ ವೆಚ್ಚ ಜೊತೆಗೆ ಬರುವ ದಿನಮಾನಗಳಲ್ಲಿ ಉತ್ಪಾದನೆಯು ಹೆಚ್ಚಿನ ಸಂಖ್ಯಯೆಲ್ಲಿ ಪ್ರಾರಂಭವಾದ ನಂತರ ಉತ್ಪಾದ ವೆಚ್ಚವೂ ಕಡಿಮೆಯಾಗಲಿದೆ.
ಈ ರೈಲುಗಳು ಪಳೆಯುಳಿಕೆ ಇಂಧನಗಳಲ್ಲಿ ಚಲಿಸುವ ಸಾಂಪ್ರದಾಯಿಕ ರೈಲುಗಳಿಗಿಂತ ಭಿನ್ನವಾಗಿದ್ದು, ಹೈಡ್ರೋಜನ್ ಮಾನವ ನಿರ್ಮಿತ ಇಂಧನವಾಗಿದೆ ಮತ್ತು ಅದನ್ನು ಸಾಮೂಹಿಕವಾಗಿ ಉತ್ಪಾದಿಸಬಹುದು. ಇದರಿಂದ ಇಂಧನ ಕಾಲಿಯಾಗುವ ಭಯವಿರುವುದಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.