ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಶ್ರೀ ಗುರು ಗಡ್ಡಯಸ್ವಾಮಿ ಗದ್ದುಗೆಗೆ ಡಿಸಂಬರ್ 1 ರಂದು ರವಿವಾರ ಸಂಜೆ ಕಾರ್ತಿಕ ದೀಪೋತ್ಸವ ಜರಗುವುದು ಎಂದು ಮಾಜಿ ಶಾಸಕ ಜಿ. ಎಸ್. ಗಡ್ಡದೇವರಮಠ ಹೇಳಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಶ್ರೀ ಗಡ್ಡಯ್ಯಸ್ವಾಮಿ ಮಠದಲ್ಲಿ ನಡೆಯುವ ಕಾರ್ತಿಕೋತ್ಸವದ ನಿಮಿತ್ಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದದರು.
ಮಠದಲ್ಲಿ ಕಾರ್ತಿಕ ದೀಪೋತ್ಸವ ನಡೆಯುತ್ತಿದ್ದು, ರವಿವಾರದಂದು ಮಠದಲ್ಲಿ ಅಜ್ಜನ ಗದ್ದುಗೆಗೆ ಕಾರ್ತಿಕ ದೀಪೋತ್ಸವ ಮತ್ತು ಧರ್ಮಸಭೆ ಹಾಗೂ ಜಾನಪದ ಕಾರ್ಯಕ್ರಮವು ಪಟ್ಟಣದ ಚನ್ನಮ್ಮನ ವನದಲ್ಲಿ ಜರಗುವುದು.
ಕಾರ್ಯಕ್ರಮದ ಸಾನಿಧ್ಯವನ್ನು ಮೈಸೂರಿನ ಜಪದಕಟ್ಟಿ ಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ವಹಿಸಿಕೊಳ್ಳುತ್ತಾರೆ ಹಾಗೂ ಇನ್ನಿತರ ಗಣ್ಯರು, ಅತಿಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಭಕ್ತರು ದೀಪ ಬೆಳಗುವ ಮೂಲಕ ಕಾರ್ತಿಕೋತ್ಸವ ಆಚರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಗೊಳಿಸಬೇಕು ಎಂದು ಅವರು ಹೇಳಿದರು.