ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ವಡ್ಡರಪಾಳ್ಯ ಬಳಿಯ ಎಟಿಎಂ ಯಂತ್ರ ಕದ್ದೊಯ್ದ ಕಳ್ಳರು ಅದರಲ್ಲಿದ್ದ ₹10 ಲಕ್ಷ ಹೊರತೆಗೆಯಲಾಗದೆ ಯಂತ್ರವನ್ನು ಮಂಚನಹಳ್ಳಿಯ ನೀಲಗಿರಿ ತೋಪಿನಲ್ಲಿ ಎಸೆದು ಹೋಗಿದ್ದಾರೆ. ಸೋಮವಾರ ಬೆಳಗಿನ ಜಾವ 3.30ರ ವೇಳೆ ಸರಕು ಸಾಗಣೆ ವಾಹನದಲ್ಲಿ ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ಬಂದ ಇಬ್ಬರು ಕಳ್ಳತನ ಸಾಧ್ಯವಾಗದ ಕಾರಣ ಎಟಿಎಂ ಯಂತ್ರದೊಂದಿಗೆ ಪರಾರಿಯಾಗಿದ್ದರು. ಯಂತ್ರ ಕತ್ತರಿಸಿ ಹಣ ತೆಗೆಯುವ ಯತ್ನ ವಿಫಲವಾದ ಕಾರಣ ಕಳ್ಳರು ಯಂತ್ರ ಎಸೆದು ಪರಾರಿಯಾಗಿದ್ದಾರೆ.