ರಾಜ್ಯದಲ್ಲಿ ಕಾಂಗ್ರೆಸ್ ನ ಐದು ಗ್ಯಾರಂಟಿಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಅಲ್ಲದೇ, ಗ್ಯಾರಂಟಿ ರದ್ದು ಮಾಡುವ ವಿಷಯವಾಗಿಯೂ ಅಷ್ಟೇ ಚರ್ಚೆಗಳು ವೈರಲ್ ಆಗುತ್ತಿವೆ. ಇಂಥಹ ಸಮಯದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಅನುದಾನದ ವಿಷಯವಾಗಿ ಗ್ಯಾರಂಟಿಗಳನ್ನ ಕಡಿತಗೊಳಿಸಬೇಕೆಂದು ಸಭೆಯಲ್ಲಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನ ಮನವಿ ಮಾಡಿಕೊಂಡಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳ ಪೈಕಿ ಅಗತ್ಯವಿಲ್ಲದ ಗ್ಯಾರಂಟಿಗಳನ್ನು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡುತ್ತೇವೆ ಎಂದು ವಿಜಯನಗರ ಜಿಲ್ಲೆ ಹೊಸಪೇಟೆ ಇಪ್ಪಿತೇರಿ ಮಾಗಾಣಿಯಲ್ಲಿ ಕಾಂಗ್ರೆಸ್ ಶಾಸಕ ಗವಿಯಪ್ಪ ಹೇಳಿದ್ದಾರೆ. ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಹೀಗಾಗಿ, ಶಕ್ತಿ ಯೋಜನೆ ಸೇರಿ ಇನ್ನೆರಡು ಗ್ಯಾರಂಟಿ ಕಡಿಮೆ ಮಾಡಲು ಕೋರಲಾಗುವುದು, ಎಂದಿದ್ದಾರೆ. ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ ಎಂದು ಗವಿಯಪ್ಪ ಕೆಲ ದಿನಗಳ ಹಿಂದೆ ಹೇಳಿದ್ದರು.