Sunday, April 20, 2025
Homeರಾಜ್ಯಒಟ್ಟಿಗೆ ಮೂರು ಪೂರಿ ತಿಂದ ಬಾಲಕ: ಉಸಿರುಗಟ್ಟಿ ಸಾವು!

ಒಟ್ಟಿಗೆ ಮೂರು ಪೂರಿ ತಿಂದ ಬಾಲಕ: ಉಸಿರುಗಟ್ಟಿ ಸಾವು!

ಹೈದರಾಬಾದ್: ಒಟ್ಟಿಗೆ ಮೂರಕ್ಕಿಂತ ಹೆಚ್ಚು ಪೂರಿಗಳನ್ನ 11 ವರ್ಷದ ಬಾಲಕನೊಬ್ಬ ಊಟಮಾಡಲು ಹೋದಾಗ ಉಸಿರಾಡಲು ಆಗದೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನ ಶಾಲೆಯೊಂದರಲ್ಲಿ ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡುವಾಗ ಏಕಕಾಲಕ್ಕೆ ಪೂರಿ ತಿಂದಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರನೇ ತರಗತಿಯ ವಿದ್ಯಾರ್ಥಿಯಾದ ಆತನನ್ನು ಶಾಲೆಯ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು, ಆದರೆ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ. ಮೃತ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments