ಡಿಸೆಂಬರ್ 31ರಿಂದ KSRTC ಹಾಗೂ BMTC ಸೇರಿದಂತೆ ನಿಗಮದ ಆರೂ ಒಕ್ಕೂಟಗಳ ಸಾರಿಗೆ ನೌಕರರ ಮುಷ್ಕರಕ್ಕೆ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ.
ಡಿಸೆಂಬರ್ 9ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ‘ಬೆಳಗಾವಿ ಚಲೋ’ ಮಾಡಿ ಅಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ನೀಡಲಿದ್ದಾರೆ.
ಜನವರಿಯಿಂದ ಸಂಬಳ ಹೆಚ್ಚಿಸಿಲ್ಲ, 4 ನಿಗಮದ ನೌಕರರಿಗೆ 38 ತಿಂಗಳ ಅರಿಯರ್ಸ್ ಬಾಕಿ ಹಣ ಮತ್ತು ಗ್ರಾಚ್ಯುಟಿ ಹಣ ಬಿಡುಗಡೆ ಮಾಡದ ಹಿನ್ನೆಲೆ ಮುಷ್ಕರಕ್ಕೆ ಕರೆ ನೀಡಲಾಗಿದೆ.ಸರ್ಕಾರ ತಕ್ಷಣ ನೌಕರರ ಸಮಸ್ಯೆಗೆ ಸ್ಪಂದಿಸಿದಲದಲ್ಲಿ ಮುಷ್ಕರ ಹಿಂದಕ್ಕೆ ಪಡೆಯಲಿದ್ದಾರೆ. ಇಲ್ಲದೇ ಹೋದಲ್ಲಿ, ಪ್ರತಿಭಟನೆಯ ಬಿಸಿ ರಾಜ್ಯದ ಜನರಿಗೆ ಫಿಕ್ಸ್ ಅನ್ನೊ ಮಾತಿದೆ.