7
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಜೊತೆ ರಿಲೇಶನ್ ಶಿಪ್‌ನಲ್ಲಿ ಇರುವುದಾಗಿ ನಟ ವಿಜಯ್ ದೇವರಕೊಂಡ ಹೇಳಿದ ಬೆನ್ನಲ್ಲೇ ಈ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು. ನಂತರ ಭಾನುವಾರ ಪುಷ್ಪ-2 ಸಿನಿಮಾದ ಇವೆಂಟ್‌ನಲ್ಲಿಯೂ ಕೂಡ ನಟಿ ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ವಿಜಯ್ ಜತೆ ಡೇಟಿಂಗ್ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
“ನೀವು ಚಿತ್ರರಂಗದಲ್ಲಿ ಇರುವವರನ್ನೇ ಮದುವೆ ಆಗುತ್ತೀರಾ ಅಥವಾ ಹೊರಗಿನವರು ಆಗಬೇಕಾ?,” ಎಂಬ ಆ್ಯಂಕರ್ ಪ್ರಶ್ನೆಗೆ ರಶ್ಮಿಕಾ, “ಅದರ ಬಗ್ಗೆ ಎಲ್ಲರಿಗೂ ತಿಳಿದಿದೆ,” ಎಂದಿದ್ದಾರೆ. ವಿಜಯ್-ರಶ್ಮಿಕಾ ಮುಂಬೈನ ರೆಸ್ಟೋರಂಟ್‌ನಲ್ಲಿರುವ ಫೋಟೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.