ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದ ಹಲವು ಜಿಲ್ಲೆಗಳಿಗೆ ಮರುನಾಮಕರಣ ಮಾಡಿತ್ತು.ಇದೀಗ ಕಾಂಗ್ರೆಸ್ ಸರ್ಕಾರ ರೈಲು ನಿಲ್ದಾಣಗಳ ಹೆಸರನ್ನ ಮರುನಾಮಕರಣಗೊಳಿಸಲು ಹೊರಟಿದೆ.
ಕೊಪ್ಪಳ ಜಿಲ್ಲೆಯ ಮೂರು ರೈಲು ನಿಲ್ದಾಣಗಳ ಹೆಸರು ಮರುನಾಮಕರಣಕ್ಕೆ ಶಿಫಾರಸು ಮಾಡಲಾಗಿದೆ ಎಂದು ಬೆಂಗಳೂರಲ್ಲಿ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ಗಂಗಾವತಿ ರೈಲು ನಿಲ್ದಾಣಕ್ಕೆ ಅಂಜನಾದ್ರಿ(ಕಿಷ್ಕಿಂಧಾ), ಮುನಿರಾಬಾದ್ ನಿಲ್ದಾಣಕ್ಕೆ ಹುಲಿಗೆಮ್ಮ ದೇವಿ, ಬಾನಾಪುರಕ್ಕೆ ಮಹಾತ್ಮ ಗಾಂಧಿ ರೈಲು ನಿಲ್ದಾಣ ಎಂದು ಮರುನಾಮಕರಣಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಶಿಫಾರಸನ್ನು ಸಿಎಂಗೆ ಕಳುಹಿಸಲಾಗಿದ್ದು, ಅವರ ಮೂಲಕ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.