ಹೈದರಾಬಾದ್: ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾಗರಿಕರಲ್ಲಿ ‘ರಾಷ್ಟ್ರ ಮೊದಲು’ ಎಂಬ ಭಾವನೆಯನ್ನು ಮೂಡಿಸುವ ಮಹತ್ವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ಒತ್ತಿ ಹೇಳಿದರು. ಹೈದರಾಬಾದ್ನಲ್ಲಿ “ರಾಷ್ಟ್ರೀಯವಾದಿ ಚಿಂತಕರ” ಸಂವಾದವಾದ ಲೋಕ ಮಂಥನ್ -2024 ಅನ್ನು ಉದ್ಘಾಟಿಸಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದರು.
“ನಮ್ಮ ಶ್ರೀಮಂತ ಬೌದ್ಧಿಕ ಸಂಪ್ರದಾಯಗಳನ್ನು ನಿರ್ಲಕ್ಷಿಸಿದ ಆಡಳಿತಗಾರರು ನಾಗರಿಕರಲ್ಲಿ ಸಾಂಸ್ಕೃತಿಕ ಕೀಳರಿಮೆಯ ಭಾವನೆಯನ್ನು ಸೃಷ್ಟಿಸಿದರು. ಶತಮಾನಗಳ ದಾಸ್ಯವು ನಾಗರಿಕರನ್ನು ಗುಲಾಮಗಿರಿಯ ಮನಸ್ಥಿತಿಗೆ ತಳ್ಳಿತು. ಭಾರತವನ್ನು ಅಭಿವೃದ್ಧಿಪಡಿಸಲು ‘ರಾಷ್ಟ್ರ ಮೊದಲು’ ಎಂಬ ಭಾವನೆಯನ್ನು ಹುಟ್ಟುಹಾಕುವುದು ಅತ್ಯಗತ್ಯ” ಎಂದು ಅವರು ಹೇಳಿದರು.
ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ.ಕಿಶನ್ ರೆಡ್ಡಿ, ತೆಲಂಗಾಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಿ.ಅನಸೂಯಾ ಮತ್ತು ಆರ್ ಎಸ್ ಎಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.