Home » News » ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಾರ್ಷಿಕ ಪಠ್ಯೇತರ ಚಟುವಟಿಕೆಗಳ ಸಂಭ್ರಮ

ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಾರ್ಷಿಕ ಪಠ್ಯೇತರ ಚಟುವಟಿಕೆಗಳ ಸಂಭ್ರಮ

by CityXPress
0 comments

ಗದಗ:ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಇರುವ ಸೃಜನಾತ್ಮಕತೆಯನ್ನು ಹೊರಸೂಸುವಲ್ಲಿ ಪ್ರಮುಖ ಪಾತ್ರವಹಿಸಿ ಶೈಕ್ಷಣಿಕ ಅಭಿವೃದ್ಧಿಯ ಜೊತೆಜೊತೆಗೆ ಸಾಹಿತ್ಯ, ಸಂಗೀತ, ಲಲಿತಕಲೆ ಹಾಗೂ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಅವರಲ್ಲಿರುವ ಸುಪ್ರ ಪ್ರತಿಭೆಯನ್ನು ಗುರುತಿಸುವ ಹಿನ್ನೆಲೆಯಲ್ಲಿ ಸ್ಟೂಡೆಂಟ್ಸ್ ಎಜುಕೇಶನ್ ಸಂಸ್ಥೆಯ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿವಿಧ ಸ್ಪರ್ಧೆಗಳು ಜರುಗಿದವು.

ಭಾರತೀಯ ಸನಾತನ ಸಂಸ್ಕೃತಿಯ ಪ್ರತೀಕವಾದ ‘ಅಂಗಳದಿ ರಂಗವಲ್ಲಿ’ಯನ್ನು ಇಂದಿನ ಯುವಪೀಳಿಗೆ ಎಷ್ಟರಮಟ್ಟಿಗೆ ತನ್ನದಾಗಿಸಿಕೊಂಡಿದೆ ಎಂಬುದರ ತಥ್ಯಕ್ಕಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ರಂಗುರಂಗಿನ ಚಿತ್ರ ಚಿತ್ತಾರದ ರಂಗೋಲಿಗಳು ನೋಡುಗರ ಮನದುಂಬಿದವು. ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕು : ಸುನಂದಾ ತೋಡೆಕರ್ ಪಡೆದರೆ, ಕು : ಪ್ರಿಯಾ ಕಾಟಿಗಾರ ಹಾಗೂ ವರ್ಷಾ ಲಕ್ಕಣ್ಣವರ & ವರಲಕ್ಷ್ಮೀ ತವಳಗೇರಿ ಪಡೆದಿದುಕೊಂಡರು. ತೃತೀಯ ಸ್ಥಾನವನ್ನು ಕು : ಸುಪ್ರೀಯಾ ಸಬರದ ಹಾಗೂ ಕು : ಪ್ರಾಚಿ ಕಬಾಡಿ ಪಡೆದುಕೊಂಡರು.

ಪ್ರಮಾಸದಲ್ಲಿ ಯಾವುದೂ ‘ಕಸ’ವಲ್ಲ, ‘ಕಸ’ವು ರಸ’ದ ಮೂಲವಾಗಲು ಸಾಧ್ಯ ಎಂಬುದರ ಸಾಕ್ಷಾತ್ಕಾರಕ್ಕಾಗಿ ವಿದ್ಯಾರ್ಥಿಗಳಿಗೆ ‘ಕಸದಿಂದ ರಸ ಸ್ಪರ್ಧೆ ಜರುಗಿತು. ನಂಬಲು ಕಷ್ಟಕರವಾಗುವಂತಹ ಪ್ರತಿಭೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಕು : ಅರ್ಚನಾ ಜಾಲಿಹಾಳ, ರೀಮಾ ಹಿರೇಮಠ, ನಿತ್ಯಾ ನೀಲಕಂಠಮಠ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಕು : ಸನಾ ನರೇಗಲ್ ಪಡೆದುಕೊಂಡರು. ತೃತೀಯ ಸ್ಥಾನವನ್ನು ಕು:ಚೈತ್ರಾ ವಾರಕರ್, ಕೀರ್ತಿ ಪಾಲನಕರ, ಹಾಗೂ ಕು:ಭೂಮಿಕಾ ಭದ್ರಾಪೂರಮಠ ಪಡೆದುಕೊಂಡರು.

ಜಗದಾದ್ಯಂತ ಚಿತ್ರಕಲೆಗೆ ತನ್ನದೇ ಆದ ಸ್ಥಾನವಿದೆ. ಆ ಕಲೆಯ ಬಲೆಯನ್ನು ನಮ್ಮ ವಿದ್ಯಾರ್ಥಿಗಳು ಯಾವ ರೀತಿ ಪ್ರದರ್ಶಿಸುತ್ತಾರೆ ಎನ್ನುವ ಕುರಿತು ‘ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕು:ಹೇತಲ್ ಶಾಹ ಪಡೆದರೆ, ಕು:ವೀರೇಶ ಬೇವಿನಮರದ, ಅಮಿತ್ ಗೊಂದಕರ್ ದ್ವಿತೀಯ ಸ್ಥಾನ ಪಡೆದರು. ತೃತೀಯ ಸ್ಥಾನವನ್ನು ಕು:ವಿಜಯ ಹಿರೇಮಠ ಹಾಗೂ ಕು:ರಾಣಿ ಮಿಸ್ಕಿನ್ ಪಡೆದರು.

banner

ಮಾನವನ ಮೂಲಭೂತ ಸಂಶೋಧನೆಗಳಲ್ಲಿ ಒಂದಾದ ‘ಅಗ್ನಿ ಬಹುಪಯೋಗಿ ವಿಶೇಷವಾಗಿ ಮಾಣವನಿಗೆ ಅವಶ್ಯಕವಾದ ಆಹಾರ ತಯಾರಿಕೆ ‘ಅಗ್ನಿ’ಯಿಂದಲೇ. ಆದರೆ ‘ಅಗ್ನಿ’ರಹಿತವಾಗಿ ಖಾಧ್ಯ ತಯಾರಿಸುವ ಸ್ಪರ್ಧೆ ನಿಜಕ್ಕೂ ಆಕರ್ಷಕ. ಈ ಸ್ಪರ್ಧೆಯಲ್ಲಿ ಕು : ಸಾಚಿ ಕಬಾಡಿ, ಪ್ರಾಚಿ ಕಬಾಡಿ ಹಾಗೂ ಅನುಷಾ ಬಸವಾ ಪ್ರಥಮ ಸ್ಥಾನ ಪಡೆದರೆ, ಕು : ಕೀರ್ತಿ ಪಾಲನಕರ, ಭೂಮಿಕಾ ಭದ್ರಾಪೂರಮಠ, ಸೋನಲ್ ಭಾಂಡಗೆ, ಸಂಜನಾ ಶೆಟ್ಟಿ, ಶ್ರೇಯಾ ಚಿಕ್ಕನರಗುಂದ, ದ್ವಿತೀಯ ಸ್ಥಾನವನ್ನು ಹಾಗೂ ತೃತೀಯ ಸ್ಥಾನವನ್ನು ಅಭಿಷೇಕ ಭಂಡಾರಿ, ಸೃಜನ್, ಪ್ರೀತಮ್ ಪಡೆದರು.

ಹಾಗೆಯೇ ದೈಹಿಕ ಸದೃಢತೆ ಮಾನಸಿಕ ಸ್ಥಿರತೆ ಎಂದು ವಿದ್ಯಾಲಯ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಜರುಗಿಸಿತು. ಬಾಲಕೀಯರಿಗಾಗಿ ಜರುಗಿದ ‘ಥ್ರೋ ಬಾಲ್’ಪಂದ್ಯದಲ್ಲಿ ಪ್ರಥಮ ವರ್ಷದ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರನ್ನು ಸೋಲಿಸಿ ಜಯವನ್ನು ತಮ್ಮದಾಗಿಸಿಕೊಂಡರು.ಬಾಲಕರಿಗಾಗಿ ಜರುಗಿದ ‘ಕ್ರೀಕೆಟ್’ಪಂದ್ಯದಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ತಂಡವು ಉಪನ್ಯಾಸಕರ ತಂಡವನ್ನು ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

            ಉತ್ಸಾಹ ಸಂಭ್ರಮದಿಂದ ಭಾಗವಹಿಸಿದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಸ್ಪರ್ಧಿಗಳಿಗೆ, ವಿಜೇತರಿಗೆ ಮಹಾವಿದ್ಯಾಲಯದ ಚೇರಮನ್ನರಾದ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯರಾದ ಪ್ರೊ,. ಪ್ರೇಮಾನಂದ ರೋಣದ, ಆಡಳಿತಾಧಿಕಾರಿಗಳಾದ ಶ್ರೀ. ಎಮ್. ಸಿ. ಹಿರೇಮಠ, ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಉಡುಪಿ ದೇಶಪಾಂಡೆ, ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ರಾಹುಲ್ ಒಡೆಯರ್ ಹಾಗೂ ಎಲ್ಲ ಉಪನ್ಯಾಸಕರು ಅಭಿನಂದಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb