ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸ್ಟುಡೆಂಟ್ ಏಜ್ಯುಕೇಶನ್ ಸೊಸೈಟಿಯ, ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ೨೦೨೪-೨೫ ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಹಾಗೂ ರಾಘವೇಂದ್ರ ಹೈಟೆಕ್ ಪದವಿ ಪೂರ್ವ ಕಾಲೇಜ ಡಾವಣಗೆರೆ ಇವರ ಸಹಯೋಗದಲ್ಲಿ ಡಾವಣಗೆರೆಯಲ್ಲಿ ಆಯೋಜಿಸಲಾಗಿತ್ತು.
ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕರಾಟೆ ಸ್ಪರ್ಧೆಗಳಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ಹರ್ಷಿತಾ ಬಾಕಳೆ (44 ಕೆ.ಜಿ) ದ್ವಿತೀಯ ಸ್ಥಾನಗಳಿಸಿದ್ದಾಳೆ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಕುಮಾರ ಸಾಹಿಲ್ ವೆರ್ಣೇಕರ್ (58 ಕೆ.ಜಿ) ತೃತೀಯ ಸ್ಥಾನ ಗಳಿಸಿದ್ದಾನೆ. ಈ ಇಬ್ಬರು ವಿದ್ಯಾರ್ಥಿಗಳು ಕಾಲೇಜಿನ ಕೀರ್ತಿಗೆ ಭಾಜನರಾಗಿದ್ದು, ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ರಾಜ್ಯಮಟ್ಟದ ಕರಾಟೆಯಲ್ಲಿ ಮಿಂಚಿದ ಈ ವಿದ್ಯಾರ್ಥಿಗಳಿಗೆ ಗದಗ ಜಿಲ್ಲಾ ಪದವಿ ಪೂರ್ವ ಉಪನಿರ್ದೇಶಕರಾದ ಶ್ರೀ ಸಿದ್ಧಲಿಂಗ ಬಂಡೂ ಮಸನಾಯಕ, ಸಂಸ್ಥೆಯ ಚೇರ್ಮನ್‌ರಾದ ಪ್ರೊ.ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೊ.ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಶ್ರೀ. ಎಂ.ಸಿ. ಹಿರೇಮಠ, ನಿರ್ದೇಶಕರಾದ ಪ್ರೋ.ರೋಹಿತ ಒಡೆಯರ, ರಾಹುಲ್ ಒಡೆಯರ, ಪ್ರೋ.ಪುನೀತ ದೇಶಪಾಂಡೆ, ಪ್ರೋ.ಸೈಯ್ಯದ್ ಮತಿನ್ ಮುಲ್ಲಾ ಹಾಗೂ ಸರ್ವ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಗೌರವಿಸಿ ಅಭಿನಂದಿಸಿದ್ದಾರೆ.